

ಕಲಬುರಗಿ : ಜಿಲ್ಲೆಯ ಶಹಾಬಾದ್ ನಗರಸಭೆಯ ವಾರ್ಡ್ ಸಂಖ್ಯೆ ೩-ನೀಚೆ ಮೊಹಲ್ಲಾ ಸೀಬರ್ ಕಟ್ಟಾ ಅಂಬೇಡ್ಕರ್ ಚೌಕ್ ಮತ್ತು ಅಫಜಲಪೂರ ತಾಲೂಕಿನ ಅಫಜಲಪೂರ ಪುರಸಭೆಯ ವಾರ್ಡ್ ಸಂಖ್ಯೆ ೧ರ ರಾಜೀವ ನಗರದ ಸದಸ್ಯ ಸ್ಥಾನ ವಿವಿಧ ಕಾರಣದಿಂದ ತೆರವಾಗಿರುವ ಹಿನ್ನೆಲೆಯಲ್ಲಿ ಅದರ ಭರ್ತಿಗೆ ಚುನಾವಣೆಯ ವೇಳಾಪಟ್ಟಿ ಹೊರಡಿಸಲಾಗಿದೆ.
ಶಹಾಬಾದ ನಗರಸಭೆಯ ವಾರ್ಡ್ ಸಂಖ್ಯೆ ೩ ಮತ್ತು ಅಫಜಲಪೂರ ಪುರಸಭೆಯ ವಾರ್ಡ್ ಸಂಖ್ಯೆ ೧ರ ಸದಸ್ಯ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿದೆ.
ಚುನಾವಣಾ ವೇಳಾಪಟ್ಟಿಯಂತೆ ನಾಮಪತ್ರ ಸಲ್ಲಿಸಲು ನವೆಂಬರ್ ೧೧ ಕೊನೆ ದಿನ. ನವೆಂಬರ್ ೧೨ರಂದು ಪರಿಶೀಲನೆ, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ನವೆಂಬರ್ ೧೪ ಕೊನೆ ದಿನ.
ಮತದಾನದ ಅಗತ್ಯವಿದ್ದರೆ ನವೆಂಬರ್ ೨೩ರಂದು ಬೆಳಗ್ಗೆ ೭ರಿಂದ ಸಂಜೆ ೫ರವರೆಗೆ ನಡೆಸಲಾಗುವುದು. ಮರು ಮತದಾನ ಇದ್ದಲ್ಲಿ ನವೆಂಬರ್ ೨೫ರಂದು ಬೆಳಗ್ಗೆ ೭ರಿಂದ ಸಂಜೆ ೫ರವರೆಗೆ ನಡೆಸಲಾಗುತ್ತಿದೆ. ಮತ ಎಣಿಕೆ ನವೆಂಬರ್ ೨೬ರಂದು ಬೆಳಗ್ಗೆ ೮ರಿಂದ ಆಯಾ ತಾಲ್ಲೂಕಾ ಕೇಂದ್ರ ಸ್ಥಾನದಲ್ಲಿ ನಡೆಸಿ ಒಟ್ಟಾರೆಯಾಗಿ ಚುನಾವಣೆ ಪ್ರಕ್ರಿಯೆ ನವೆಂಬರ್ ೨೬ಕ್ಕೆ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.