ಸಾರ್ವಜನಿಕರು, ಗ್ರಾಪಂ ನಡುವಿನ ಸಂಕೋಲೆ

jamabandhi
ಹೆಬ್ರಿ ಗ್ರಾಪಂ ವತಿಯಿಂದ ನಡೆದ ಜಮಾಬಂದಿಯಲ್ಲಿ ನೋಡಲ್ ಅಧಿಕಾರಿ, ಉಡುಪಿ ಜಿಪಂ ಯೋಜನಾ ನಿರ್ದೇಶಕ ಪ್ರಶಾಂತ್ ರಾವ್ ಕಡತ ಪರಿಶೀಲಿಸಿದರು
Published on

ಹೆಬ್ರಿ: ಜಮಾಬಂದಿ ಸಾರ್ವಜನಿಕರಿಗಾಗಿ ನಡೆಯುವುದು. ಸಾರ್ವಜನಿಕರು ಹಾಗೂ ಗ್ರಾಪಂ ಸಂಕೋಲೆ ಇದಾಗಿದೆ. ಜನರು ಹೆಚ್ಚು ಭಾಗವಹಿಸುವುದರ ಮೂಲಕ ಪಾರದರ್ಶಕತೆ ಬಗ್ಗೆ ತಿಳಿದುಕೊಳ್ಳಲು ಸಾಧ್ಯಎಂದು ನೋಡಲ್ ಅಧಿಕಾರಿ ಹಾಗೂ ಉಡುಪಿ ಜಿಪಂ ಯೋಜನಾ ನಿರ್ದೇಶಕ ಪ್ರಶಾಂತ್ ರಾವ್ ಹೇಳಿದರು.

ಹೆಬ್ರಿ ಗ್ರಾಪಂ ಜಮಾಬಂದಿಯ ನೋಡಲ್ ಅಧಿಕಾರಿಯಾಗಿ, ಕಡತ ಪರಿಶೀಲನೆ ನಡೆಸಿ ಬುಧವಾರ ಮಾತನಾಡಿದರು. ಹೆಬ್ರಿ ಗ್ರಾಪಂ ಅಧ್ಯಕ್ಷ ತಾರನಾಥ್ ಎಸ್.ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಪ್ರಿಯಾ, ಪಿಡಿಒ ಸದಾಶಿವ ಸೇರ್ವೆಗಾರ್, ಲೆಕ್ಕ ಸಹಾಯಕಿ ಪ್ರತಿಭಾ, ಜಮಾಬಂದಿ ಸಹಾಯಕ ಅಧಿಕಾರಿಗಳಾದ ಪದ್ಮನಾಭ ಕುಲಾಲ್, ಸಚಿನ್, ಗ್ರಾಪಂ ಸದಸ್ಯರು, ಸಿಬ್ಬಂದಿ, ಸ್ವಸಹಾಯ ಸಂಘದ ಸದಸ್ಯರು, ಸಾರ್ವಜನಿಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net