ಪ್ರತಿಭಾ ಕಾರಂಜಿಯಲ್ಲಿ ತಾಲೂಕು ಮಟ್ಟಕ್ಕೆ

pratibha
ಪ್ರತಿಭಾ ಕಾರಂಜಿಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳು
Published on

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ ಉಡುಪಿ ವಲಯ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಉಡುಪಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಉಡುಪಿ ಆಶ್ರಯದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದಾರೆ.

ರಸಪ್ರಶ್ನೆಯಲ್ಲಿ ಅನಮಯ ಕೆ.ದಿವಾಕರ್ ಮತ್ತು ತನಿಷ್ಕಾ ಕೆ.ಶೆಟ್ಟಿ ಪ್ರಥಮ, ಜಾನಪದಗೀತೆಯಲ್ಲಿ ಸಮೃದ್ಧಿ ಪ್ರಥಮ, ಭರತನಾಟ್ಯದಲ್ಲಿ ಸ್ವಸ್ಥಿಶ್ರೀ ದ್ವಿತೀಯ, ಭಾವಗೀತೆಯಲ್ಲಿ ಶಿಪ್ರಾ ಚಾತ್ರ ದ್ವಿತೀಯ, ರಂಗೋಲಿಯಲ್ಲಿ ನವ್ಯಾ ಎಚ್. ದ್ವಿತೀಯ, ಇಂಗ್ಲಿಷ್ ಭಾಷಣದಲ್ಲಿ ಪ್ರತ್ವಿತಾ ಪಿ.ಶೆಟ್ಟಿ ದ್ವಿತೀಯ ಹಾಗೂ ಧಾರ್ಮಿಕ ಪಠಣದಲ್ಲಿ ಸುಖಿ ಎಸ್.ಎನ್. ತೃತೀಯ ಬಹುಮಾನ ಪಡೆದಿದ್ದಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ. ಸಾಂಸ್ಕೃತಿಕ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net