

ಕಟಕೋಳ: ಕಟಕೋಳ ಪ್ರೌಢಶಾಲೆಗಳ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಗ್ರಾಮದ ಶ್ರೀಗಂಗಾಧರ ಕುಮಾರ ಸ್ವಾಮಿಗಳ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ತಾಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ 200 ಮೀಟರ್ ಓಟ, 100, ಮೀ ಹರ್ಡಲ್ಸ್, 4ಗಿ100 ರಿಲೇ, ಹ್ಯಾಮರ್ ಎಸೆತದಲ್ಲಿ ಪ್ರಥಮ, ಎತ್ತರ ಜಿಗಿತ, 400 ಮೀಟರ್ ಓಟ, 400 ಮೀ ಹರ್ಡಲ್ಸ್, ಪೋಲ್ ವಾಲ್ಟ್, ಥ್ರೋ ಬಾಲ್, ಕಬಡ್ಡಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.
ಬಾಲಕಿಯರ ವಿಭಾಗದ ಎತ್ತರ ಜಿಗಿತದಲ್ಲಿ ಪ್ರಥಮ, ದ್ವೀತಿಯ, 4ಗಿ400 ಹರ್ಡಲ್ಸ್ನಲ್ಲಿ ಪ್ರಥಮ, ಭರ್ಜಿ ಎಸೆತದಲ್ಲಿ ದ್ವೀತಿಯ, 100, 400 ಮೀ ಹರ್ಡಲ್ಸ್ ಪ್ರಥಮ, ದ್ವೀತಿಯ, ಹ್ಯಾಮರ್, ಪೋಲ್ ವಾಲ್ಟ್ ಪ್ರಥಮ, ವಾಲಿಬಾಲ್, ಖೋಖೋದಲ್ಲಿ ದ್ವೀತಿಯ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಶಾಲೆ ಶಿಕ್ಷಕರು, ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ. ಮುಖ್ಯಗುರು ಎಸ್.ಟಿ. ಹುಣಸಿಕಟ್ಟಿ,ಡಿ.ಬಿ.ಡಂಬಳ, ಎಂ.ಎಸ್.ಪಾಟೀಲ, ಬಿ.ಎಲ್.ಕೆಳಗೇರಿ, ಬಿ.ಆರ್.ದ್ಯಾಮನಗೌಡರ, ಯು.ಪಿ.ದಂಡನ್ನವರ, ಆರ್.ಡಿ.ಗೊರವರ, ಎಸ್.ಟಿ.ಗುಂಜೀರಿ ಇದ್ದಾರೆ.