ಎಸ್‌ಜಿ ಫೈಟರ್ಸ್‌ ಗೆ ಇಪಿಎಲ್-3 ಗರಿ

25knk1
ಕನಕಗಿರಿ ಕೆಪಿಎಸ್ ಮೈದಾನದಲ್ಲಿ ನಡೆದ ಇಪಿಎಲ್-3 ಪಂದ್ಯದಲ್ಲಿ ಗೆದ್ದ ತಂಡ ಪ್ರಶಸ್ತಿಯೊಂದಿಗೆ ಸಂಭ್ರಮಿಸಿತು. ತಂಡದ ನಾಯಕ ರಾಘವೇಂದ್ರ ನಾಯ್ಕ, ಶಿವಪ್ಪ ಹೆಳವರ, ಸಂಗಮೇಶ ಹಿರೇಮಠ, ಹನುಮಂತ ಇತರರಿದ್ದರು.
Published on

ಕನಕಗಿರಿ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಸರ್ಕಾರಿ ನೌಕರರ, ಅನುದಾನ, ಅತಿಥಿ, ಗುತ್ತಿಗೆ ನೌಕರರ (ಇಪಿಎಲ್-3) ಕ್ರಿಕೆಟ್ ಪಂದ್ಯಾವಳಿಯಲ್ಲಿ ಎಸ್‌ಜಿ ಫೈಟರ್ಸ್‌ ತಂಡ ಪ್ರಥಮ ಸ್ಥಾನ ಗಳಿಸಿದೆ.

ಒಟ್ಟು 6 ತಂಡಗಳು ಕ್ರಿಕೆಟ್ ಟೂರ್ನಾಮೆಂಟ್‌ನಲ್ಲಿ ಭಾಗವಹಿಸಿದ್ದು, ರಜಾ ದಿನಗಳಲ್ಲಿ ಪಂದ್ಯಗಳು ನಡೆದಿದ್ದು, ಭಾನುವಾರದಂದು ನಡೆದ ಫೈನಲ್ ಪಂದ್ಯದಲ್ಲಿ ಎಸ್‌ಜಿ ಫೈಟರ್ಸ್‌ ಹಾಗೂ ಸುವರ್ಣಗಿರಿ ಸ್ನೈಪರ್ಸ್‌ ತಂಡಗಳ ನಡುವಿನ ಸೆಣಸಾಟದಲ್ಲಿ,

ಮೊದಲು ಬ್ಯಾಟಿಂಗ್ ಮಾಡಿದ ಸುವರ್ಣಗಿರಿ ಸ್ನೈಪರ್ಸ್‌ ತಂಡ 12 ಓವರ್‌ಗಳಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು 100ರನ್‌ಗಳನ್ನು ಗಳಿಸಿತ್ತು. ಎಸ್‌ಜಿ ಫೈಟರ್ಸ್‌ ತಂಡ ಇನ್ನೂ ಒಂಬತ್ತು ಎಸೆತಗಳು ಬಾಕಿ ಇದ್ದಾಗಲೇ 102 ರನ್‌ಗಳನ್ನು ಹೊಡೆಯುವ ಮೂಲಕ ಗೆಲುವು ಸಾಧಿಸಿತು.

ಇಪಿಎಲ್-3 ಗೆದ್ದ ತಂಡಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೆಂಕಟ ಮಧುಸೂದನ, ಪ್ರಾಶಾಶಿ ಸಂಘದ ಅಧ್ಯಕ್ಷೆ ಶಂಶಾದ್ ಬೇಗಂ, ಕೆಪಿಎಸ್ ಉಪ ಪ್ರಾಚಾರ್ಯ ಜಗದೀಶ ಹಾದಿಮನಿ ಪ್ರಶಸ್ತಿ ವಿತರಿಸಿದರು. ಆಯೋಜಕರಾದ ಶಿವಾರೆಡ್ಡಿ ಮಣ್ಣೂರು, ಸಿದ್ದಾರೂಢ ಬಣಕಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net