ಮಕ್ಕಳ ಮೇಲೆ ಪೇದೆ ಲೈಂಗಿಕ ದೌರ್ಜನ್ಯ

Published on

 ತಂದೆಯಿoದಲೇ ಕೃತ್ಯ ತಾಯಿಯಿಂದ ದೂರು !  > ವಿಲಕ್ಷಣ  ಆಘಾತಕಾರಿ ಘಟನೆ ಬೆಳಕಿಗೆ 

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಅಪ್ತಾಪ್ತ ವಯಸ್ಕ ತನ್ನ ಎರಡು ಗಂಡು ಮಕ್ಕಳ ಮೇಲೆ ತಂದೆಯೇ ಲೈಂಗಿಕ ದೌರ್ಜನ್ಯ ನಡೆಸಿದ ಅಮಾನವೀಯ, ವಿಲಕ್ಷಣ ಹಾಗೂ ಆಘಾತಕಾರಿ ಘಟನೆಯೊಂದು ಕಲಬುರಗಿ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಜಿಲ್ಲಾ ಮೀಸಲು ಪಡೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿರುವ ತಾರಾಸಿಂಗ್ ರಾಠೋಡ ಎಂಬಾತನೇ ದುಷ್ಕೃತ್ಯ ನಡೆಸಿದ ತಂದೆ. ನಾನು ಪೊಲೀಸ್ ಆಗಿz್ದೆÃನೆ. ಯಾರು ಏನು ಮಾಡಲು ಆಗುವುದಿಲ್ಲ ಎಂದು ಹೇಳಿ ಪತ್ನಿಗೂ ಸಹ ಬೆದರಿಕೆ ಹಾಕಿ ದೌರ್ಜನ್ಯ ನಡೆಸುತ್ತಿದ್ದ. ಅಲ್ಲದೆ ಮಕ್ಕಳ ಗುಪ್ತಾಂಗಕ್ಕೂ ಹಿಂಸೆ ನೀಡುತ್ತಿದ್ದ ಎಂದು ದೂರಲಾಗಿದೆ.

ಪೇದೆಯಾಗಿರುವ ಆತನಿಗೆ ೧೨ ಮತ್ತು ೧೬ ವರ್ಷದ ಇಬ್ಬರು ಮಕ್ಕಳಿದ್ದಾರೆ. ಅವರಿಬ್ಬರಿಗೂ ನಿರಂತರವಾಗಿ ಕಿರುಕುಳ ನೀಡಿಕೊಂಡು ಬರುತ್ತಿದ್ದ. ಸರಿಯಾಗಿ ಕರ್ತವ್ಯ ನಿರ್ವಹಿಸದೆ ಹಲವು ಸಸ್ಪೆಂಡ್ ಶಿಕ್ಷೆಗೂ ಸಹ ಗುರಿಯಾಗಿದ್ದ ಎನ್ನಲಾಗುತ್ತಿದೆ. ಪತ್ನಿಗೂ ಹಿಂಸೆ ನೀಡುತ್ತಿದ್ದ ಅದನ್ನು ಸಹಿಸಿಕೊಂಡಿದ್ದಳು. ಮಕ್ಕಳಿಗೂ ಲೈಂಗಿಕ ಹಿಂಸೆ ನೀಡಲು ಆರಂಭಿಸಿದಾಗ ಪತ್ನಿ ಬುದ್ದಿ ಹೇಳಿದ್ದರು, ಹಲವು ಸಲ ಪತ್ನಿ ವಿರೋಧಿಸಿ, ಪ್ರತಿಭಟಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಇದನ್ನು ತಾಳಲಾಗದೆ ಪತ್ನಿಯೇ ತನ್ನ ಗಂಡನ ನೀಚ ಕೃತ್ಯದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈಗಾಗಲೇ ತಾರಾಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಮಹಿಳಾ ಠಾಣೆಯಲ್ಲಿ ಪ್ರಕರಣವೊಂದು ಕೆಲ ದಿನಗಳ ಹಿಂದೆ ದಾಖಲಾಗಿದೆ. ಈಗ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಕುರಿತು ವಿಶ್ವವಿದ್ಯಾಲಯ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net