

ಬಸವಕಲ್ಯಾಣ: ಮುಖ್ಯ ಶಿಕ್ಷಕನೊಬ್ಬ ವಸತಿ ನಿಲಯದ ಮಹಿಳಾ ವಾರ್ಡನ್‌ಗೆ ಲೈಂಗಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಕಿಟ್ಟಾ ಗ್ರಾಮದ ನಿವಾಸಿ, ಮುಖ್ಯ ಶಿಕ್ಷಕ ಅಶೋಕರೆಡ್ಡಿ ಹುಡೆ (೫೫) ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದಾರೆ. ಕಸ್ತೂರಬಾ ಗಾಂಧಿ ಬಾಲಕಿಯರ ವಸತಿನಿಲಯದಲ್ಲಿ ಗುತ್ತಿಗೆ ಆಧಾರದಲ್ಲಿ ವಾರ್ಡನ್ ಆಗಿರುವ ಮಹಿಳೆಗೆ ಎರಡು ವರ್ಷದಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಕಳೆದ ವರ್ಷದ ಜನವರಿಯಲ್ಲಿ ಮಹಿಳೆಯನ್ನು ಕೊಠಡಿಗೆ ಕರೆಸಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಮೈ-ಕೈ ಮುಟ್ಟಿದ್ದಾನೆ. ಹಣದ ಆಮಿಷ ತೋರಿಸಿ ಸಹಕರಿಸುವಂತೆ ಪೀಡಿಸಿದ್ದಾನೆ ಎಂದು ಮಹಿಳೆ ನೀಡಿದ ದೂರಿನನ್ವಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.