ಬಸ್ಸಿನೊಳಗೆ ಮಹಿಳೆಯ ಬಿಗಿದಪ್ಪಿದಾತನ ಬಂಧನ

arrested
Published on

ಕಾಸರಗೋಡು: ಬಸ್ ಪ್ರಯಾಣಿಕೆಯನ್ನು ಬಿಗಿದಪ್ಪಿ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ ವ್ಯಕ್ತಿಯನ್ನು ಸಹಪ್ರಯಾಣಿಕರು ಸೆರೆಹಿಡಿದು ನಗರಠಾಣೆ ಪೊಲೀಸರಿಗೊಪ್ಪಿಸಿದ್ದಾರೆ. ಆಲಪ್ಪುಳ ನಿವಾಸಿ ನಾಸರ್(53) ಬಂಧಿತ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ವಠಾರದಲ್ಲಿ ಘಟನೆ ನಡೆದಿದೆ. ಬಸ್ಸಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರನ್ನು ನಾಸರ್ ಬಿಗಿದಪ್ಪಿ ಹಿಡಿದು ಕಿರುಕುಳಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಬೊಬ್ಬಿಡುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ ಈತನನ್ನು ಸಹ ಪ್ರಯಾಣಿಕರು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ್ದರು. ಆಲಪ್ಪುಳ ನಿವಾಸಿಯಾಗಿರುವ ಈತ ವಿವಿಧೆಡೆ ಸಂಚಾರ ನಡೆಸುತ್ತಿದ್ದು, ಇತ್ತೀಚೆಗೆ ಕಾಸರಗೋಡಿಗೆ ತಲುಪಿರುವುದಾಗಿ ಮಾಹಿತಿಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net