ಆರ್ಥಿಕ ದುರ್ಬಲರಿಗೆ, ನಿರ್ಗತಿಕರಿಗೆ ಆಶಾಕಿರಣ: ದಿನೇಶ್ ಗುಂಡೂರಾವ್ ಹೇಳಿಕೆ

New Project (58)
Published on

ಮೂಲ್ಕಿ: ಆರ್ಥಿಕ ದುಸ್ಥಿತಿಯ ಹಾಗೂ ನಿರ್ಗತಿಕ ಜನರಿಗೆ ಆಶಾಕಿರಣವಾಗಿ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದ್ದು ಜನರು ಇದರ ಪ್ರಯೋಜನ ಪಡೆಯಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ನಗರ ಅಭಿವೃದ್ಧಿ ಕೋಶ ಮಂಗಳೂರು, ಮೂಲ್ಕಿ ನಗರ ಪಂಚಾಯಿತಿ ಆಶ್ರಯದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದರು.

ಮೂಲ್ಕಿ ಪ್ರದೇಶದಲ್ಲಿ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರು ಇರುವ ಬಗ್ಗೆ ಸ್ಥಳೀಯ ಭೀಮಾ ಶಂಕರ್ ಸಚಿವರ ಗಮನ ಸೆಳೆದರು. ಇಂದಿರಾ ಕ್ಯಾಂಟೀನ್‌ನಲ್ಲಿ ಉತ್ತರ ಕರ್ನಾಟಕದವರ ಜೋಳದ ರೊಟ್ಟಿ, ರಾಗಿ ಮುದ್ದೆ, ಶೇಂಗಾ ಚಟ್ನಿ ತಿಂಡಿಗೆ ಆದ್ಯತೆ ನೀಡುವುದರ ಜತೆಗೆ ಕರಾವಳಿ ಭಾಗದ ತಿನಿಸುಗಳಿಗೆ ಪ್ರಾಧಾನ್ಯ ನೀಡಲಾಗುವುದು ಎಂದರು. ಶೀಘ್ರ ಕಂದಾಯ ಸಚಿವರನ್ನು ಭೇಟಿ ಮಾಡಿ ಕಾಮಗಾರಿ ಹಂತದಲ್ಲಿರುವ ಪ್ರಜಾಸೌಧ ಕಟ್ಟಡ ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ತಿಗೊಳಿಸಿ ಜುಲೈನಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.

ನಗರ ಪಂಚಾಯತಿ ವತಿಯಿಂದ ನೂತನ ಸಭಾಂಗಣ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಅಪರ ಜಿಲ್ಲಾಧಿಕಾರಿ ಸಂತೋಷ್, ಸಹಾಯಕ ಆಯುಕ್ತ ಹರ್ಷವರ್ಧನ್, ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ತಾಪಂ ಇಒ ಕುಸುಮಾಧರ, ಮೂಲ್ಕಿ ನಪಂ ಮುಖ್ಯಾಧಿಕಾರಿ ಮಧುಕರ್, ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಪುತ್ತುಭಾವ, ಹರ್ಷರಾಜ ಶೆಟ್ಟಿ, ಯೋಗೀಶ್ ಕೋಟ್ಯಾನ್, ವಿಮಲಾ ಪೂಜಾರಿ, ಸುಭಾಷ್ ಶೆಟ್ಟಿ, ಶೈಲೇಶ್ ಕುಮಾರ್, ಮಂಜುನಾಥ ಕಂಬಾರ, ಬಾಲಚಂದ್ರ ಕಾಮತ್, ಸಂದೀಪ್, ಲೋಕೇಶ್ ಕೋಟ್ಯಾನ್, ಭೀಮಾ ಶಂಕರ್, ಪಡುಪಣಂಬೂರು ಗ್ರಾಪಂ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ ಬರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಸ್ಥಳೀಯ ನಾಯಕರಾದ ಸುನೀಲ್ ಆಳ್ವ, ರಂಗನಾಥ ಶೆಟ್ಟಿ, ಜನಾರ್ದನ್ ಕೆಎಸ್ ರಾವ್ ನಗರ, ಗೋಪಿನಾಥ ಪಡಂಗ, ಹಸನ್ ಬಶೀರ್ ಕುಳಾಯಿ, ಶಶೀಂದ್ರ ಸಾಲ್ಯಾನ್, ರಕ್ಷಿತ್ ಕೊಳಚಿ ಕಂಬಳ, ರಂಜನ್ ಶೆಟ್ಟಿ, ಕೆಂಪುಗುಡ್ಡೆ, ನಂದಾ ಪಾಯಸ್ ಮತ್ತಿತರರು ಉಪಸ್ಥಿತರಿದ್ದರು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net