ಹೊಲಿಗೆ ತರಬೇತಿ ಸಮಾರೋಪ

9
Published on

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಕಾಲ ಹೊಲಿಗೆ ತರಬೇತಿಯನ್ನು ವಗ್ಗ ವಲಯದ ವಾಮದಪದವು ಪ್ರೇರಣಾ ಜ್ಞಾನವಿಕಾಸ ಕೇಂದ್ರದಲ್ಲಿ ನಡೆಸಲಾಗಿದ್ದು, ಅದರ ಸಮಾರೋಪ ಕಾರ್ಯಕ್ರಮ ನಡೆಯಿತು.

ಪುಂಜಾಲಕಟ್ಟೆ ವಲಯದ ಜನ ಜಾಗೃತಿ ವೇದಿಕೆ ಸದಸ್ಯ ಹರೀಂದ್ರ ಪೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಏಳಿಗಾಗಿ ಜ್ಞಾನವಿಕಾಸ ಕೇಂದ್ರದಡಿಯಲ್ಲಿ ನಡೆದ ಹೊಲಿಗೆ ತರಬೇತಿ ಯಶಸ್ವಿಯಾಗಿದೆ ಎಂದರು.

ಮಾತೃಶ್ರೀ ಅಮ್ಮ ಕಾರ್ಯಕ್ರಮದಡಿಯಲ್ಲಿ ಕಲಿತ ಹೊಲಿಗೆ ವೃತ್ತಿ ನಿಂತ ನೀರಾಗದೆ ಮುಂದುವರಿಸುವ ಬಗ್ಗೆ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಬಂಟ್ವಾಳ ತಾಲೂಕು ಯೋಜನಾಧಿಕಾರ ಜಯಾನಂದ ಪಿ.ಮಾಹಿತಿ ನೀಡಿದರು.

ಜನ ಜಾಗೃತಿ ವೇದಿಕೆ ಸದಸ್ಯ ನವೀನ್ ಚಂದ್ರ, ಸಿಆರ್‌ಪಿ ಚೇತನ, ಒಕ್ಕೂಟದ ಅಧ್ಯಕ್ಷೆ ಅನಿತಾ ಪ್ರಭು ಶುಭ ಹಾರೈಸಿದರು. ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ, ಹೊಲಿಗೆ ತರಬೇತಿ ಶಿಕ್ಷಕಿ ಪವಿತ್ರ, ಗೋಪಾಲ ಕೃಷ್ಣ ಚೌಟ, ಆನಂದ ಆಚಾರ್ಯ ಉಪಸ್ಥಿತರಿದ್ದರು. ಹೊಲಿಗೆ ತರಬೇತಿ ಪಡೆದ ಶ್ರೀನಿಧಿ, ಕವಿತಾ ಸುಮಿತ್ರ ಅನಿಸಿಕೆ ವ್ಯಕ್ತಪಡಿಸಿದರು. ಹೊಲಿಗೆ ತರಬೇತಿ ಪಡೆದ ಸದಸ್ಯರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು.

ಸೇವಾ ಪ್ರತಿನಿಧಿಗಳಾದ ಮೋಹನ್‌ದಾಸ್ ಗಟ್ಟಿ ಹಾಗೂ ಹೇಮಲತಾ ಉಪಸ್ಥಿತರಿದ್ದರು. ಪ್ರೇರಣಾ ಹಾಗೂ ನೇಸರ ಜ್ಞಾನವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿದ್ದರು. ಜ್ಞಾನ ವಿಕಾಸ ಕೇಂದ್ರದ ತಾಲೂಕು ಸಮನ್ವಯಾಧಿಕಾರಿ ಶ್ರುತಿ ಸ್ವಾಗತಿಸಿದರು. ಕೇಂದ್ರದ ಸಂಯೋಜಕಿ ಗುಣವತಿ ವಂದಿಸಿದರು. ಶಿವರಾಜ್ ಗಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net