ಪಲಿಮಾರು ಶ್ರೀಗಳ ಸಪ್ತತಿ ಸಂಭ್ರಮ

PALIMARU
ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು.
Published on

ಪಡುಬಿದ್ರಿ: ಪಲಿಮಾರು ಮಠ ಶ್ರೀ ಯೋಗದೀಪಿಕಾ ವಿದ್ಯಾಪೀಠದ ಹಳೇ ವಿದ್ಯಾರ್ಥಿಗಳು ವಿದ್ಯಾಪೀಠದ ಕುಲಪತಿಗಳಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಸಪ್ತತಿ ಸಂಭ್ರಮ ಪೂರ್ವಭಾವಿ ಧರ್ಮಕರ್ಮಾನುಷ್ಠಾನಗಳನ್ನು ಬುಧವಾರ ಪಲಿಮಾರು ಮಠದಲ್ಲಿ ಆರಂಭಿಸಿದರು. ಮಹಾಗಣಪತಿ ಹೋಮ, ವಾಯುಸ್ತುತಿ ಹೋಮ, ಪವಮಾನಹೋಮ, ಧನ್ವಂತರಿ ಹೋಮ ನಡೆಸಿ ಶ್ರೀದೇವರಲ್ಲಿ ಪ್ರಾರ್ಥಿಸಲಾಯಿತು. ಗುರುಗಳ ಸಪ್ತತಿ ಸಮಾರಂಭ ಸಮಾಪ್ತಿ ಆಗುವ ಪರ್ಯಂತ ಮುಂದಿನ ಒಂದೂವರೆ ವರ್ಷದಲ್ಲಿ ಪ್ರತೀ ತಿಂಗಳ ಜನ್ಮ ನಕ್ಷತ್ರದಲ್ಲಿ ಎಪ್ಪತ್ತೆರಡು ತಂತ್ರಸಾರೋಕ್ತ ಮಂತ್ರಗಳ ಹೋಮ ಸಹಿತ ಸಂಹಿತಾಹೋಮ ಮುಂತಾದ ಶತಾಧಿಕ ಹೋಮ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳುವ ಮೂಲಕ ಗುರುಗಳ ಅಂತರ್ಯಾಮಿ ದೇವರ ಅನುಗ್ರಹವನ್ನು ಪಡೆಯುವಂತೆ ಪ್ರಾರ್ಥಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net