

ಗೋಣಿಕೊಪ್ಪಲು: ಚೆಕ್ಕೇರ ಒಕ್ಕ, ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಹುದಿಕೇರಿ ಜನತಾ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಚೆಕ್ಕೇರ ಕ್ರಿಕೆಟ್ ನಮ್ಮೆಯಲ್ಲಿ 7 ತಂಡಗಳು ಮುನ್ನಡೆ ಪಡೆದುಕೊಂಡಿವೆ.
ಅಲ್ಲುಮಾಡ ಮತ್ತು ಮೂಕಳಮಾಡ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ಮೂಕಳಮಾಡ ತಂಡ ನಿಗದಿತ 6 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 59 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಅಲ್ಲುಮಾಡ ತಂಡ 6 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿ 29 ರನ್‌ಗಳಿಂದ ಸೋಲು ಕಂಡಿತು.
ಐಪುಮಾಡ ಮತ್ತು ಕಲ್ಲುಮಾದಂಡ ತಂಡದ ನಡುವೆ ನಡೆದ ಪಂದ್ಯಾವಳಿಯಲ್ಲಿ ಕಲ್ಲುಮಾದಂಡ ತಂಡ ಬಾರದ ಕಾರಣ ಐಪುಮಾಡ ಮುಂದಿನ ಹಂತಕ್ಕೆ ತೆರಳಿತು.
ಕಾಂಡೇರ ಮತ್ತು ಪಟ್ಟಡ ತಂಡಗಳ ನಡುವೆ ನಡೆದ ಪಂದ್ಯಾವಳಿದಲ್ಲಿ ಮೊದಲು ಬ್ಯಾಟ್ ಮಾಡಿದ ಕಾಂಡೇರ ತಂಡ ನಿಗದಿತ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿತು. ಪಟ್ಟಡ ತಂಡ ವಿಕೆಟ್ ನಷ್ಟವಿಲ್ಲದೆ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿ 28 ರನ್‌ಗಳಿಂದ ಸೋಲು ಕಂಡಿತು.
ಮಾಚೆಟ್ಟಿರ ಮತ್ತು ಚೀಕಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಚೀಕಂಡ ನಿಗದಿತ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತು. ಮಾಚೆಟ್ಟಿರ ತಂಡ 6 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಷ್ಟೇ ಶಕ್ತವಾಯ್ತು.
ಮೇಕೇರಿರ ಮತ್ತು ಮೇವಡ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಮೇವಡ ತಂಡ ನಿಗದಿತ 6 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿತು. ಮೇಕೇರಿರ ತಂಡ 1 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಅಜ್ಜಮಾಡ ಮತ್ತು ಉದ್ದಪಂಡ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಉದ್ದಪಂಡ ತಂಡ ನಿಗದಿತ 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 87 ರನ್ ಗಳಿಸಿತು. ಅಜ್ಜಮಾಡ ತಂಡ 5 ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿ 38 ರನ್ ಗಳಿಂದ ಸೋಲು ಕಂಡಿತು.
ಸಕರ್ಂಡ ಮತ್ತು ಅದೇಂಗಡ ತಂಡಗಳ ನಡುವೆ ಪಂದ್ಯಾವಳಿದಲ್ಲಿ ಸರ್ಕಂಡ ತಂಡ ನಿಗದಿತ 8 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿತು. ಅದೇಂಗಡ ತಂಡ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು