

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸಮಗ್ರ ಉಪಾಧ್ಯಾಯರ ಪ್ರಗತಿಪರ ಸಂಘದ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಕೊಡಮಾಡುವ ಆದರ್ಶ ಉಪಾಧ್ಯಾಯ ಪ್ರಶಸ್ತಿಗೆ ಕಲಬುರಗಿ ತಾಲೂಕಿನ ದಕ್ಷಿಣ ವಲಯದಿಂದ ಏಳು ಜನರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ದಕ್ಷಿಣ ವಲಯದ ಅಧ್ಯಕ್ಷರಾದ ನಂದಿನಿ ಸನಬಾಲ್ ತಿಳಿಸಿದ್ದಾರೆ.
ಶೀಲಾ ಕುಲಕರ್ಣಿ ( ಅಂಗನವಾಡಿ ಕಾರ್ಯಕರ್ತೆ), ಕಲ್ಯಾಣರಾವ ಆರ್. ಬೀರಾದರ (ಪ್ರಾಥಮಿಕ ಶಾಲೆ) , ಸುಬ್ಬುರಾಯಪ್ಪ ಜಿ. ಎನ್ ( ಬಿ. ಆರ. ಪಿ), ಸುನಂದಾ ಚೌದರಿ ( ಮಾದರಿ ಶಾಲೆ), ರವೀಂದ್ರ ಸಜ್ಜೆ ( ಉಪನ್ಯಾಸಕರು), ಡಾ. ವಿದ್ಯಾ ಡಿ. ( ಸಹ ಪಾಧ್ಯಾಪಕರು) ಹಾಗೂ (ಪುಂಡಲಿಕ ಬಲವಂತಪ್ಪ ಪೊಲೀಸ್ ಇಲಾಖೆ) ಆಯ್ಕೆಯಾಗಿದ್ದಾರೆ.
ಸೆ. 24ರಂದು ಬೆಳಿಗ್ಗೆ 10-27 ನಗರದ ಬ್ರಹ್ಮಕುಮಾರಿ ದೇವಾಲಯದ ಸಭಾಂಗಣ ಗೀತಾನಗರಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲರು ಭಾಗವಹಿಸಬೇಕೆಂದು ನಂದಿನಿ ಸನಬಾಲ ತಿಳಿಸಿದ್ದಾರೆ