ತರಬೇತಿ ಜತೆ ವ್ಯಕ್ತಿತ್ವ ವಿಕಸನ : ಹರಿ ಎಚ್. ಹೇಳಿಕೆ

New Project (3)
Published on

ಕಿನ್ನಿಗೋಳಿ: ರಾಮಕೃಷ್ಣ ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ ಉಭಯ ಜಿಲ್ಲೆಯಲ್ಲಿಯೇ 8.6 ಗ್ರೇಡ್ ಪಡೆದು ಮೊದಲ ಸ್ಥಾನದಲ್ಲಿದೆ, ಅಲ್ಲದೆ ರಾಜ್ಯದಲ್ಲಿ 13ನೇ ಸ್ಥಾನದಲ್ಲಿದೆ. ತರಬೇತಿ ಜತೆ ವ್ಯಕ್ತಿತ್ವ ವಿಕಸನಕ್ಕೆ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಹರಿ ಎಚ್.ಹೇಳಿದರು.

ಸಂಸ್ಥೆಯ ಸಭಾಭವನದಲ್ಲಿ ನಡೆದ ಸೇತುಬಂಧ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಮೂಲ್ಕಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಿಶಾಂತ್ ಕಿಲೆಂಜೂರು, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ವಿಶ್ವನಾಥ್, ಕಚೇರಿ ಅಧೀಕ್ಷಕ ಹರಿಶ್ಚಂದ್ರ ಉಪಸ್ಥಿತರಿದ್ದರು. ಕಿರಿಯ ತರಬೇತಿ ಅಧಿಕಾರಿಗಳಾದ ಪೂರ್ಣಿಮಾ ಸ್ವಾಗತಿಸಿ. ಶಯನಾ ಬಿ.ವಂದಿಸಿದರು,ರಾಘವೇಂದ್ರ ರಾವ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net