ಶೈಕ್ಷಣಿಕ ಅಭಿವೃದ್ಧಿ, ಜಾಗತಿಕ ಸಹಭಾಗಿತ್ವದಿಂದ ಪ್ರಗತಿ : ಪ್ರೊ.ಎಂ.ಎಸ್.ಮೂಡಿತ್ತಾಯ ಹೇಳಿಕೆ

13
Published on

ಉಳ್ಳಾಲ: ಶೈಕ್ಷಣಿಕ ಅಭಿವೃದ್ಧಿ, ಜಾಗತಿಕ ಸಹಭಾಗಿತ್ವ, ಸಂಶೋಧನೆ ಮತ್ತು ಆವಿಷ್ಕಾರ, ವಿಸ್ತರಣಾ ಸೇವೆ ಇವುಗಳಲ್ಲೆಲ್ಲ ನಿಟ್ಟೆಯ ಪ್ರಗತಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಮೂಲಕ ಸಮಾಜದ ಪ್ರತಿಯೊಬ್ಬರಿಗೂ ಸಂಸ್ಥೆ ತಲುಪುತ್ತಿರುವುದು ಹೆಮ್ಮೆಯ ಸಂಗತಿ ಎಂದು ನಿಟ್ಟೆ ವಿವಿ ಉಪಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಹೇಳಿದರು.

ಅವಿಷ್ಕಾರ್ ಸಭಾಂಗಣದಲ್ಲಿ ನಿಟ್ಟೆ ಪರಿಗಣಿಸಲ್ಪಟ್ಟ ವಿವಿಯ ಅಂಗಸಂಸ್ಥೆ ದೇರಳಟ್ಟೆ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ 40ನೇ ವರ್ಷ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಅಲುಮ್ನಿ ಮೀಟ್ 2025 ಪೂರ್ವ ಸಮ್ಮೇಳನ ಗುರುವಾರ ಉದ್ಘಾಟಿಸಿ ಮಾತನಾಡಿದರು.

ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ 40 ವರ್ಷ ಪಯಣದಲ್ಲಿ ಸಂಸ್ಥೆ ಅಧ್ಯಕ್ಷ ವಿನಯ್ ಹೆಗ್ಡೆ ಅವರ ದೃಷ್ಟಿ, ತ್ಯಾಗ ಮತ್ತು ಶ್ರಮವಿದೆ. ಅವರ ಮಾರ್ಗದರ್ಶನದಿಂದಲೇ ನಿಟ್ಟೆ ವಿಶ್ವವಿದ್ಯಾಲಯ ಈ ಮಟ್ಟಿಗೆ ಬೆಳೆಯಲು ಸಾಧ್ಯವಾಗಿದೆ. ವಿಶ್ವದ 1,500 ವಿಶ್ವವಿದ್ಯಾಲಯಗಳ ಪೈಕಿ ನಿಟ್ಟೆ ವಿಶ್ವವಿದ್ಯಾಲಯ 35ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ ಎಂದರು.

ಎ.ಬಿ.ಶೆಟ್ಟಿ ದಂತ ಮಹಾವಿದ್ಯಾಲಯದ ಡೀನ್ ಪ್ರೊ.ಮಿತ್ರಾ ಎನ್.ಹೆಗ್ಡೆ ಮಾತನಾಡಿದರು. ವಿಶ್ರಾಂತ ಡೀನ್ ಡಾ.ಶ್ರೀಧರ್ ಶೆಟ್ಟಿ, ಪೂರ್ವ ಸಮ್ಮೇಳನಾಧ್ಯಕ್ಷ ಡಾ.ಆದಿತ್ಯ ಶೆಟ್ಟಿ, ಉಪಪ್ರಾಂಶುಪಾಲ ಡಾ.ಎಂ.ಎಸ್.ರವಿ, ಆಯೋಜನಾ ಕಾರ್ಯದರ್ಶಿ ಡಾ.ಶಿಶಿರ್ ಶೆಟ್ಟಿ, ಸಹ ಆಯೋಜನಾ ಕಾರ್ಯದರ್ಶಿ ಡಾ.ಪ್ರೀತೇಶ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net