

ರಾಮನಗರ: ರೈತ ಉತ್ಪಾದಕ ಕಂಪನಿಗಳ ಮೂಲಕ ನೀರಾ ಇಳಿಸಿ ಮಾರಾಟ ಮಾಡುವ ಪ್ರಕ್ರಿಯೆಗೆ ಜಿಲ್ಲೆಯಲ್ಲಿ ಆರಂಭಿಕ ಹಿನ್ನಡೆಯಾಗಿದ್ದು, ಸರ್ಕಾರಿ ಇಲಾಖೆಗಳಿಂದ ನಿರೀಕ್ಷಿತ ನೆರವು ದೊರೆಯದೇ ಇರುವುದು ಇದಕ್ಕೆ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.
ಜಿಲ್ಲೆಯಲ್ಲಿ ಕಳೆದ ಎರಡೂವರೆ ದಶಕದಿಂದಲೂ ನೀರಾ ಉತ್ಪಾದನೆಗೆ ಕಾನೂನಿನ ಮಾನ್ಯತೆ ನೀಡಬೇಕು ಮತ್ತು ಉದ್ಯಮವಾಗಿ ಪರಿಗಣಿಸಬೇಕು ಎನ್ನುವ ಹೋರಾಟ ನಡೆಯುತ್ತಲೇ ಇದೆ. ಇದಕ್ಕೆ ಪೂರಕವಾಗಿ ಸರ್ಕಾರ ಸಹ ನೀರಾ ನೀತಿ ಜಾರಿಗೆ ತರುವ ಮೂಲಕ ನೀರಾ ಉತ್ಪಾದನೆಗೆ ತಾಂತ್ರಿಕ ಬೆಂಬಲ ಪಡೆದುಕೊಂಡು ನೀರಾ ಇಳಿಕೆಗೆ ಚಾಲನೆ ನೀಡುವ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಂಬಲ ದೊರೆಯದ ಕಾರಣ ಸದ್ಯಕ್ಕೆ ಖಾಸಗಿ ವ್ಯಕ್ತಿಯೊಬ್ಬರು ಆರಂಭಿಸಿರುವ ನೀರಾ ಸಂಸ್ಕರಣ ಟಕಕ್ಕೆ ನೀರಾ ಪೂರೈಕೆ ಚಿಂತನೆ ನಡೆದಿದೆ.
ಎರಡು ಕಂಪನಿಗೆ ಅನುಮತಿ: ಚನ್ನಪಟ್ಟಣ ನೀರಾ ಚಳವಳಿಗೆ ವೇದಿಕೆ ನಿರ್ಮಿಸಿದ ಕ್ಷೇತ್ರ. ಚನ್ನಪಟ್ಟಣದಲ್ಲಿ ನೀರಾ ಉತ್ಪಾದನೆಗೆ ಎಲ್ಲ ಸಿದ್ಧತೆಗಳು ಪ್ರಾರಂಭವಾಗಿದ್ದು, ಎರಡು ಎಫ್ಪಿಒ(ರೈತ ಉತ್ಪಾದಕ ಕಂಪನಿ &ಾರ್ಮರ್ ಪ್ರೊಡಕ್ಷನ್ ಆರ್ಗನೈಸೇಷನ್)ಗಳ ಮೂಲಕ ನೀರಾವನ್ನು ಇಳಿಸಿ, ಸಂಸ್ಕರಣೆ ಮಾಡಿ, ಅದನ್ನು ಗ್ರಾಹಕರಿಗೆ ಮಾರಾಟ ಮಾಡುವ ಹಾಗೂ ನೀರಾದಿಂದ ತಯಾರಿಸಬಹುದಾದ ಉಪ ಉತ್ಪನ್ನಗಳಾದ ಬೆಲ್ಲ, ಸಕ್ಕರೆ, ಚಾಕೋಲೇಟ್ ಮೊದಲಾದವುಗಳನ್ನು ತಯಾರಿಸುವ ಟಕ ಸ್ಥಾಪನೆಗೂ ಸಿದ್ಧತೆ ನಡೆದಿದೆ. ಈಗಾಗಲೇ ಚನ್ನಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಂಗಲ್ ತೋಟಗಾರಿಕಾ ಬೆಳೆಗಾರರ ರೈತ ಉತ್ಪಾದನಾ ಕಂಪನಿ ಮತ್ತು ವಿರೂಪಾಪುರ ಗ್ರಾಮದಲ್ಲಿರುವ ಮತ್ತೊಂದು ರೈತ ಉತ್ಪಾದಕ ಕಂಪನಿಯ ಮೂಲಕ ನೀರಾ ಉತ್ಪಾದನೆಗೆ ಸಿದ್ಧತೆ ನಡೆಸಲಾಗಿದೆ. ನೀರಾವನ್ನು ಹುಳಿ ಬಂದು ಮದ್ಯವಾಗಿ ಮಾರ್ಪಾಡುಗೊಳ್ಳದಂತೆ ಸಂಸ್ಕರಣೆ ಮಾಡಿ ಮಾರಾಟ ಮಾಡಲು ಅವಕಾಶವಿದ್ದು, ಇದಕ್ಕೆ ಅಬಕಾರಿ ಇಲಾಖೆಯಿಂದ ಅನುಮತಿ ಪಡೆಯಬೇಕು. ಹೀಗಾಗಿ ಅನುಮತಿ ಪಡೆಯಲು ಎಫ್ಪಿಒಗಳು ಮುಂದಾಗಿವೆ.
ಸದ್ಯಕ್ಕೆ ಕಷ್ಟ: ಸರ್ಕಾರ ವೈಜ್ಞಾನಿಕವಾಗಿ ನೀರಾ ಇಳಿಸಲು ಅನುಮತಿ ನೀಡಿ ಸುಮ್ಮನಾಗಿತ್ತು. ಆದರೆ, ವೈಜ್ಞಾನಿಕವಾಗಿ ನೀರಾ ಇಳಿಸಲು ಅಬಕಾರಿ ಇಲಾಖೆ ಅನುಮತಿ, ನೀರಾ ಸಂಸ್ಕರಣೆ, ಮಾರಾಟ ಮೊದಲಾದ ಪ್ರಕ್ರಿಯೆಗಳನ್ನು ರೈತರು ಕೋಟ್ಯಂತರ ರೂ. ಸ್ವಂತ ಬಂಡವಾಳ ಹೂಡಿ ಪ್ರಾರಂಭಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೈ ಬಿಟ್ಟಿದ್ದರು. ಸರ್ಕಾರದ ನೆರವು ಪಡೆದು ಎಫ್ಪಿಒ ಮೂಲಕ ಟಕ ಸ್ಥಾಪನೆಗೆ ರೈತ ಪರ ಸಂಟನೆಗಳು ಸಹ ಮುಂದಾಗಿ, ಶಾಸಕ ಸಿ.ಪಿ.ಯೋಗೇಶ್ವರ್ ಜತೆಗೆ ಹಲವಾರು ಕಡೆಗಳಲ್ಲಿ ಅಧ್ಯಯನ ಪ್ರವಾಸವನ್ನೂ ನಡೆಸಿದ್ದವು. ಆದರೆ, ಹೆಚ್ಚಿನ ಬಂಡವಾಳ ನಿರೀಕ್ಷೆಯಲ್ಲಿರುವ ಉದ್ಯಮಕ್ಕೆ ಸರ್ಕಾರ, ಇಲಾಖೆಗಳಿಂದ ಸೂಕ್ತ ಸ್ಪಂದನೆ ವ್ಯಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ರೈತರು ಕೈ ಚೆಲ್ಲಿದ್ದಾರೆ.
ಖಾಸಗಿ ಸಂಸ್ಥೆಗೆ: ಸದ್ಯಕ್ಕೆ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅತಿ ಶ್ರೀದಲ್ಲಿಯೇ ಈ ಟಕ ಕಾರ್ಯಾರಂಭ ಮಾಡಲಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ನೀರಾ ಇಳಿಸಲು ಮುಂದಾಗುವ ಸಂ, ಸಂಟನೆ ಮೂಲಕ ಪ್ರತಿ ತೆಂಗು ಬೆಳೆಗಾರರಿಗೆ ಗರಿಷ್ಠ 10 ಮರಗಳಿಗೆ ಮಾತ್ರ ಅನುಮತಿ ನೀಡಲಿದೆ. ಅಬಕಾರಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮರಗಳನ್ನು ಗುರುತಿಸಿ ಪ್ರತಿ ಮರಕ್ಕೆ ಸಂಖ್ಯೆಯನ್ನು ನೀಡಲಿದ್ದಾರೆ. ಈ ಮರಗಳಿಂದ ಮಾತ್ರ ನೀರಾವನ್ನು ಇಳಿಸಬೇಕಿದೆ. ಇನ್ನು ಅನುಮತಿ ಪಡೆದ ಮರಗಳಲ್ಲಿ ಮಾತ್ರ ನೀರಾವನ್ನು ಇಳಿಸಬೇಕಿದ್ದು, ಇಳಿಸಿದ ನೀರಾವನ್ನು ಈ ಸಂಸ್ಥೆಗೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನೀರಾ ಉತ್ಪಾದನೆ ಮತ್ತು ಸಂಸ್ಕರಣೆಗೆ ಸಂಬಂಧಿಸಿದಂತೆ ಎಫ್ಪಿಒ ಮೂಲಕ ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ಆದರೆ ಸದ್ಯಕ್ಕೆ ಹಿನ್ನಡೆಯಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಎಫ್ಪಿಒ ಮೂಲಕವೇ ನೀರಾ ಇಳಿಸಿ ಸಂಸ್ಕರಣೆ ಮಾಡಿ ಮಾರಾಟ ಮಾಡುವ ಸಂಬಂಧ ಕ್ರಮವಹಿಸಲಾಗುವುದು. > ಧರಣೀಶ್ ರಾಂಪುರ, ಅಧ್ಯಕ್ಷ, ಜಿಲ್ಲಾ ತೆಂಗು ಮತ್ತು ಮಾವು ಬೆಳೆಗಾರರ ರೈತ ಉತ್ಪಾದಕ ಕಂಪನಿ ನೀರಾ ಇಳಿಸಿ ಸಂಸ್ಕರಣೆ ಮಾಡಿ ಮಾರುಕಟ್ಟೆ ಮಾಡಲು ಸಾಕಷ್ಟು ಆರ್ಥಿಕ ನೆರವಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಇಲಾಖೆಗಳ ಮೂಲಕ ನಿರೀಕ್ಷಿತ ಬೆಂಬಲ ದೊರೆಯುತ್ತಿಲ್ಲ. ಹಿನ್ನಡೆ ಎನ್ನುವದಕ್ಕಿಂತ ಆರಂಭಿಕ ತೊಡಕು ಎನ್ನಬಹುದು. ಇದನ್ನು ಮುಂದಿನ ದಿನಗಳಲ್ಲಿ ನಿವಾರಿಸಿ ನಮ್ಮ ಗುರಿ ಮುಟ್ಟಲು ಕ್ರಮವಹಿಸಲಾಗುವುದು. > ಸಿ.ಪುಟ್ಟಸ್ವಾಮಿ, ರೈತ ಮುಖಂಡರು