ಶುದ್ಧ ಕುಡಿಯುವ ನೀರು ಪೂರೈಕೆಗೆ ಹಣ ಮೀಸಲಿಡಿ

IMG-20250301-WA0007
ಪಿರಿಯಾಪಟ್ಟಣ ತಾಲೂಕು ರಾಮನಾಥ ತುಂಗ ಗ್ರಾಮದಲ್ಲಿ ಸುಮಾರು ಏಳು ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
Published on

ರಾವಂದೂರು: ಶುದ್ಧ ಕುಡಿಯುವ ನೀರು ಪೂರೈಕೆ ಹಾಗೂ ಜನರ ಆರೋಗ್ಯ ಕಾಪಾಡಲು ಗ್ರಾಮ ಪಂಚಾಯಿತಿಗಳು ಹಣವನ್ನು ಮೀಸಲಿಡಬೇಕು ಎಂದು ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕು ರಾಮನಾಥ ತುಂಗ ಗ್ರಾಮದಲ್ಲಿ ಸುಮಾರು ಏಳು ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮ ಪರಿಮಿತಿಯ ಸಂಪರ್ಕ ರಸ್ತೆಗಳು ಉತ್ತಮವಾಗಿದ್ದಾಗ ಸಂಚಾರ ಒತ್ತಡ ಕಡಿಮೆಯಾಗುತ್ತದೆ. ಗ್ರಾಮೀಣ ಜನರಿಗೆ  ಮೂಲ ಸೌಕರ್ಯ ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಅಸ್ವಾಳು ಗ್ರಾಮದಲ್ಲಿ ಚರಂಡಿ, ರಸ್ತೆ ಕಾಮಗಾರಿ, ರಾಮನಾಥತುಂಗದಲ್ಲಿ ವಾಲ್ಮೀಕಿ ಸಮುದಾಯ ಭವನಕ್ಕೆ ಇದೇ ವೇಳೆ ಭೂಮಿಪೂಜೆ ನೆರವೇರಿಸಲಾಯಿತು.

ತಾಪಂ ಮಾಜಿ ಅಧ್ಯಕ್ಷ ಆರ್.ಎಸ್.ಮಹದೇವ್, ಆಶ್ರಯ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ರಾಮಾಚಾರಿ, ವಿ.ಜಿ. ಕೊಪ್ಪಲು ಲೋಕೇಶ್, ರೇವಣ್ಣ, ಗ್ರಾಪಂ ಅಧ್ಯಕ್ಷ ಜಯಮ್ಮ, ಆರ್.ಎಸ್.ಹರೀಶ್, ಮುತ್ತುರಾಜ್, ನಾಯಕರ ಸಂಘದ ಅಧ್ಯಕ್ಷ ಪುಟ್ಟಯ್ಯ, ತಾಲೂಕು ದಂಡಾಧಿಕಾರಿ ನಿಸರ್ಗಪ್ರಿಯ, ತಾಲೂಕು ಪಂಚಾಯಿತಿ, ಕಾರ್ಯನಿರ್ವಹಣಾಧಿಕಾರಿ ಸುನಿಲ್, ಜಿಲ್ಲಾ ಪಂಚಾಯಿತಿ ಎಇಇ ವೆಂಕಟೇಶ್, ಇಂಜಿನಿಯರ್ ದಿನೇಶ್, ಡಾಕ್ಟರ್ ಸೋಮಯ್ಯ, ಕುರಿ ಮತ್ತು ಉಣ್ಣೆ ಮಂಡಳಿಯ ಸದಸ್ಯ ಮಹದೇವ್, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಮಹದೇವ್, ಶಫಿ, ಪಿಡಿಒ ಕವಿತಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net