ಅಂತ್ಯಕ್ರಿಯೆಗೆ ಜಾಗ ನಿಗದಿಪಡಿಸಿ ಶೆಡ್ ನಿರ್ಮಿಸಿ

ಸಿರಿಗೇರಿ ಪಿಡಿಒ ಯು.ರಾಮಪ್ಪಗೆ ಆರ್ಯವೈಶ್ಯ ಸಮುದಾಯದಿಂದ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಕೃಷ್ಣಮೂರ್ತಿ ಶೆಟ್ಟಿ, ಶ್ರೀಕಾಂತ ಶೆಟ್ಟಿ, ಅವಿನಾಶ್, ಬಿ.ಸೂರ್ಯನಾರಾಯಣ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಈ.ವಿಶ್ವನಾಥ, ಕೆ.ದ್ಯಾವಣ್ಣ, ವಿ.ಮುದಿಯಪ್ಪ ಇತರರಿದ್ದರು.

Published on

ಸಿರಿಗೇರಿ: ಆರ್ಯವೈಶ್ಯ ಸಮುದಾಯದ ಮೃತರ ದಹನ ಕ್ರಿಯೆಗೆ ಗ್ರಾಮದ ಸಾರ್ವಜನಿಕ ಸ್ಮಶಾನದಲ್ಲಿ ಸ್ಥಳ ನಿಗದಿಪಡಿಸುವಂತೆ ಆರ್ಯವೈಶ್ಯ ಸಮುದಾಯದಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯು.ರಾಮಪ್ಪಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಮುಖಂಡ ಕೃಷ್ಣಮೂರ್ತಿ ಮಾತನಾಡಿ, ಗ್ರಾಮದಲ್ಲಿ ಸಮುದಾಯದವರು ಮರಣ ಹೊಂದಿದಾಗ ಸಾರ್ವಜನಿಕ ಸ್ಮಶಾನದಲ್ಲಿ ದಹನ ಮಾಡುವ ಮೂಲಕ ಅಂತ್ಯಕ್ರಿಯೆ ಮಾಡುತ್ತೇವೆ. ಆದರೆ, ಇತ್ತೀಚೆಗೆ ನಮ್ಮ ಸಮುದಾಯದವರು ಮರಣ ಹೊಂದಿದಾಗ ಕೆಲವರು ಸ್ಮಶಾನದದಲ್ಲಿ ಅಂತ್ಯಕ್ರಿಯೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಇದರಿಂದ ಮೃತರ ಅಂತ್ಯಕ್ರಿಯೆ ಸಂಪ್ರದಾಯದ ಪ್ರಕಾರ ಮಾಡಲು ಆಗುತ್ತಿಲ್ಲ. ಆದ್ದರಿಂದ ನಮ್ಮ ಸಮುದಾಯಕ್ಕೆ ಸ್ಮಶಾನದಲ್ಲಿ ಜಾಗ ನಿಗದಿಪಡಿಸಿ. ಚಿತೆ ದಹನ ಕ್ರಿಯೆಗೆ ಶೆಡ್ ನಿರ್ಮಿಸುವಂತೆ ಮನವಿ ಮಾಡಿದರು.

ಪಿಡಿಒ ರಾಮಪ್ಪ ಮಾತನಾಡಿ, ಏ.24 ರಂದು ಸಾಮಾನ್ಯ ಸಭೆ ಆಯೋಜಿಸಿ ಈ ವಿಷಯದ ಬಗ್ಗೆ ಚರ್ಚಿ ಸಾರ್ವಜನಿಕ ಶೆಡ್ ನಿರ್ಮಿಸಲು ಜಾಗ ಪರಿಶೀಲಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net