ಬದಿಯಡ್ಕ: ಕುಂಬ್ಡಾಜೆ ಗ್ರಾಮ ಪಂಚಾಯಿತಿಯ 9ನೇ ಮವ್ವಾರು ಸಮೀಪದ ನಡುವಂಗಡಿಯಲ್ಲಿರುವ ಸಾರ್ವಜನಿಕ ಸ್ಮಶಾನದ ಸುತ್ತು ಮುತ್ತಲು ಕೆಎಸ್‌ಟಿಪಿ ರಸ್ತೆ ಕಾಮಗಾರಿಗೋಸ್ಕರ ತಂದಿರಿಸಿದ ಜಲ್ಲಿ ತೆರವುಗೊಳಿಸದೆ ಸಮಸ್ಯೆ ಉಂಟಾಗಿದೆ. ಅಲ್ಲದೆ ಸ್ಮಶಾನದ ಸುತ್ತು ಗೋಡೆ ಹಾನಿಗೊಳಿಸಲಾಗಿದೆ. ಈ ಹಿಂದೆ ಹಲವು ದೂರು ನೀಡಿದರೂ ಸಂಬಂಧಪಟ್ಟವರು ಕ್ರಮ ಕೈಗೊಂಡಿಲ್ಲ. ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಕುಂಬ್ಡಾಜೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಬಿಜೆಪಿ ಬದಿಯಡ್ಕ ಮಂಡಲ ಕಾರ್ಯದರ್ಶಿ ಹರೀಶ ಗೋಸಾಡ ದೂರು ನೀಡಿದ್ದಾರೆ.
ಜತೆಗೆ ಕುಂಬ್ಡಾಜೆ ಪಂಚಾಯಿತಿಯ 12ನೇ ವಾರ್ಡ್ ಮಾವಿನಕಟ್ಟೆ ಬಳಿಯ ಮಸೀದಿಯ ಎದುರುಗಡೆ ಬಳ್ಳಪದವು ರಸ್ತೆಗೆ ತಾಗಿಕೊಂಡು ಕಾಂಕ್ರೀಟ್ ಕೆಲಸ ಸರಿಯಾಗಿ ನಿರ್ವಹಿಸಿಲ್ಲ. ಇದನ್ನು ಸರಿಪಡಿಸಲು ಸಂಬಂಧಪಟ್ಟವರು ತುರ್ತುಕ್ರಮ ಕೈಗೊಳ್ಳಬೇಕು. ಶೀಘ್ರ ದುರಸ್ತಿ ಮಾಡಿಕೊಡಬೇಕೆಂದು ಆಗ್ರಹಿಸಲಾಗಿದೆ.