

ಬೆಳ್ತಂಗಡಿ: ಕರ್ನಾಟಕ ಮಂದಿರ ಮಹಾಸಂಘದ ವತಿಯಿಂದ ಬೆಳ್ತಂಗಡಿ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಒಂದು ದಿನದ ತಾಲೂಕು ಮಟ್ಟದ ಮಂದಿರ ಅಧಿವೇಶನ ನಡೆಯಿತು.
ಅಧಿವೇಶನದಲ್ಲಿ 80ಕ್ಕೂ ಅಧಿಕ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ಭಾಗವಹಿಸಿದ್ದರು. ದೇವಸ್ಥಾನಗಳ ರಕ್ಷಣೆ ದೃಷ್ಟಿಯಿಂದ ಅಧಿವೇಶನದಲ್ಲಿ ಕೆಲವು ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಈ ನಿರ್ಣಯವನ್ನು ಸರ್ಕಾರ ಅನುಷ್ಠಾನಕ್ಕೆ ತರಬೇಕು ಎಂದು ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಅವರಿಗೆ ಮನವಿ ನೀಡಲಾಯಿತು.
ಮಂದಿರ ಮಹಾಸಂಘದ ತಾಲೂಕಿನ ಸಮನ್ವಯಕ ಜಯ ಸಾಲಿಯಾನ್ ಬಲೆಂಜ, ಸದಾಶಿವ ಹೊಳ್ಳ, ವಾಮನ ಬಾಳಿಗ, ಸಂತೋಷ್ ಕುಮಾರ್, ಹರೀಶ ಮುದ್ದಿನಡ್ಕ ಹಾಗೂ ಯೋಗೀಶ್ ಕೆಂಬರ್ಜೆ ಉಪಸ್ಥಿತರಿದ್ದರು.