ಬದುಕುವ ದಾರಿ ತೋರಿಸುವ ಪ್ರವಚನಗಳು

ಅಳವಂಡಿ ಸಮೀಪದ ಬಿಸರಳ್ಳಿಯ ಶ್ರೀಗವಿಸಿದ್ಧೇಶ್ವರ ಶಾಖಾ ಮಠದಲ್ಲಿ ಆರಂಭವಾದ ಪುರಾಣ-ಪ್ರವಚನದ ಷಟಸ್ಥಲ ಧ್ವಜಾರೋಹಣವನ್ನು ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ನೆರವೇರಿಸಿದರು. ಡಾ.ಹಿರೇಶಾಂತವೀರ ಸ್ವಾಮೀಜಿ, ಪ್ರಮುಖರಾದ ರಮೇಶ, ಈರಣ್ಣ, ನಾಗಪ್ಪ, ಹಾಲಪ್ಪ, ಯಂಕರಡ್ಡಿ, ಮಂಜುನಾಥ ಇತರದ್ದರು.
ಅಳವಂಡಿ ಸಮೀಪದ ಬಿಸರಳ್ಳಿಯ ಶ್ರೀಗವಿಸಿದ್ಧೇಶ್ವರ ಶಾಖಾ ಮಠದಲ್ಲಿ ಆರಂಭವಾದ ಪುರಾಣ-ಪ್ರವಚನದ ಷಟಸ್ಥಲ ಧ್ವಜಾರೋಹಣವನ್ನು ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ನೆರವೇರಿಸಿದರು. ಡಾ.ಹಿರೇಶಾಂತವೀರ ಸ್ವಾಮೀಜಿ, ಪ್ರಮುಖರಾದ ರಮೇಶ, ಈರಣ್ಣ, ನಾಗಪ್ಪ, ಹಾಲಪ್ಪ, ಯಂಕರಡ್ಡಿ, ಮಂಜುನಾಥ ಇತರದ್ದರು.
Published on

ಅಳವಂಡಿ: ಪುರಾಣ, ಪ್ರವಚನಗಳು ಬದುಕುವ ದಾರಿ ತೋರಿಸುತ್ತವೆ. ಜೀವನಕ್ಕೆ ಬೇಕಾದ ಸಲಹೆಗಳನ್ನು ತಿಳಿಸುವ ಜತೆಗೆ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡುತ್ತವೆ ಎಂದು ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಬಿಸರಳ್ಳಿ ಶ್ರೀ ಗವಿಸಿದ್ಧೇಶ್ವರ ಶಾಖಾ ಮಠದಲ್ಲಿ ಶನಿವಾರ ಲಿಂ.ಜ.ಶಿವಶಾಂತವೀರ ಹಾಗೂ ಜ.ಮರಿಶಾಂತವೀರ ಮಹಾ ಶಿವಯೋಗಿಗಳ ಪುಣ್ಯಸ್ಮರಣೆ ನಿಮಿತ್ತ ಆಯೋಜಿಸಿರುವ 11 ದಿನಗಳ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣರು, ಸಾಧು-ಸಂತರು, ಜ್ಞಾನಿಗಳು ಆದರ್ಶ ಹಾಗೂ ಸಾಧನೆ ಮೂಲಕ ಅಜರಾಮರರಾಗಿದ್ದಾರೆ. ಜ್ಞಾನ ನಾಶವಾಗದ ಆಸ್ತಿ ಆದ್ದರಿಂದ ಎಲ್ಲರೂ ವಿದ್ಯಾವಂತರಾಗಿ ಉತ್ತಮ ಸಮಾಜ ನಿರ್ಮಿಸಿ. ಶರಣರ ವಾಣಿಗಳನ್ನು ಅಳವಡಿಸಿಕೊಳ್ಳಿ ಎಂದರು.

ಹೂವಿನಹಡಗಲಿಯ ಡಾ.ಹಿರೇಶಾಂತವೀರ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹಿಂದಿನಿಂದಲೂ ಜಾತ್ರೆ, ಹಬ್ಬ,-ಹರಿದಿನಗಳಲ್ಲಿ ಪುರಾಣ, ಪ್ರವಚನಗಳು ಜನಪ್ರಿಯವಾಗಿವೆ. ಒಗ್ಗಟ್ಟಿನಿಂದ ಇಂಥ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು. ಇದರಿಂದ ಮನಸ್ಸು ಉತ್ಸಾಹದಿಂದ ಕೂಡಿರುತ್ತದೆ. ಬಿಸರಳ್ಳಿ ಗ್ರಾಮ ಭಕ್ತಿಯ ಶಕ್ತಿ ಕೇಂದ್ರವಾಗಿದ್ದು ಭಕ್ತಿಯಲ್ಲಿ ಅಪಾರ ಶಕ್ತಿ ಇದೆ ಎಂದು ತಿಳಿಸಿದರು.

ಪ್ರಮುಖರಾದ ರಮೇಶರಡ್ಡಿ ಮೂಲಿಮನಿ, ಈರಣ್ಣ ಕೋನಸಾಗರ, ಹಾಲಪ್ಪ ಮೈನಳ್ಳಿ, ನಾಗಪ್ಪ ಬಿಕನಳ್ಳಿ, ಯಂಕರಡ್ಡಿ ಅಂತೂರು, ಮಂಜುನಾಥ ಸಜ್ಜನ, ರುದ್ರಯ್ಯ ಬ್ರಹನ್ಮಠ, ಸಿದ್ಲಿಂಗಪ್ಪ ಬಿಕನಳ್ಳಿ, ಶ್ರೀಮರುಳಸಿದ್ದೇಶ್ವರ ಭಜನಾ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net