

ನರಗುಂದ: ಪ್ರತಿ ವರ್ಷದಂತೆ ಈ ಬಾರಿಯೂ ಶರನ್ನನವರಾತ್ರಿ ನಿಮಿತ್ತ ನರಗುಂದ ಸೋಮಾಪೂರ ನಾಗಲಿಂಗ ನಿಲಯದಲ್ಲಿ ಹಮ್ಮಿಕೊಳ್ಳಲಾಗುವ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಭಾರತೀಯ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಶ್ರೀನಿವಾಸ ಇನಾಮದಾರ ಮಾತನಾಡಿ, 99 ವರ್ಷಗಳಿಂದ ನಾಗಲಿಂಗ ನಿಲಯದಲ್ಲಿ ಶ್ರೀದೇವಿ ಪುರಾಣ ಪ್ರವಚನ ನಡೆಸಲಾಗುತ್ತಿದ್ದು ಈಬಾರಿ 100ನೇ ವರ್ಷದ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದರು.
ಪುರಸಭೆ ಮಾಜಿ ಸದಸ್ಯ ಮಹೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೌನೇಶ ಪತ್ತಾರ, ರಾಜು ಆಚಾರ್ಯ, ಆನಂದ ಮುರಾಳ, ನಬಿಸಾಬ ಕಿಲ್ಲೇದಾರ, ಮುತ್ತನಗೌಡ ಪಾಟೀಲ, ಮಾರುತಿ ದೊಡಮನಿ, ದೇವೇಂದ್ರ ಬಡಿಗೇರ ಇತರರು ಇದ್ದರು.