ಎತ್ತುಗಳಿಗೆ ಗಂಭೀರ ಗಾಯ

03 rtl 02
Published on

ರಟ್ಟಿಹಳ್ಳಿ: ತಾಲೂಕಿನ ಹಿರೇಮೊರಬ ಗ್ರಾಮದ ರೈತ ಬಸವರಾಜ ಪುಟ್ಟತಮ್ಮಣ್ಣನವರ ಅವರ ಚಕ್ಕಡಿ ಬುಧವಾರ ತುಂಗಾ ಮೇಲ್ದಂಡೆಯ ಮುಖ್ಯ ಕಾಲುವೆಗೆ ಬಿದ್ದ ಪರಿಣಾಮ ಎರಡೂ ಎತ್ತುಗಳು ಗಂಭೀರವಾಗಿ ಗಾಯಗೊಂಡಿವೆ. ಬಿತ್ತನೆಗಾಗಿ ಗೊಬ್ಬರ ಚೀಲಗಳನ್ನು ಚಕ್ಕಡಿಯಲ್ಲಿ ಹಾಕಿಕೊಂಡು ಗ್ರಾಮದ ಶಿರಗಂಬಿ ರಸ್ತೆಯಲ್ಲಿರುವ ತುಂಗಾ ಮೇಲ್ದಂಡೆಯ ಮುಖ್ಯ ಕಾಲುವೆಯ ಪಕ್ಕದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಎತ್ತುಗಳ ಕಾಲು ಜಾರಿ ಚಕ್ಕಡಿ ಸಮೇತ ಕಾಲುವೆಗೆ ಬಿದ್ದಿವೆ. ಈ ವೇಳೆ ರೈತ ಬಸವರಾಜ ಚಕ್ಕಡಿಯಿಂದ ಹಾರಿ ಪ್ರಾಣಾಪಾಯದಿಂದ ರಕ್ಷಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net