ಮಾಗಡಿಯಲ್ಲಿ ಸರಣಿ ಕಳ್ಳತನ

IMG-20231108-WA0045.jpg
Published on

ಮಾಗಡಿ: ಪಟ್ಟಣದಲ್ಲಿ ಮಂಗಳವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ.

ಪಟ್ಟಣದ ಟಿಬಿ ರಸ್ತೆಯ ಜೈ ಜವಾನ್ ಜೈ ಕಿಸಾನ್ ಮೆಗಾ ಮಾರ್ಟ್, ಬಾಲಾಜಿ ಮುಂಭಾಗದ ಕೇಬಲ್ ಕಚೇರಿ, ಧ್ಬನಿ ವರ್ಧಕ ಅಂಗಡಿ,ಬೇಕರಿಗಳ ಬೀಗ ಹೊಡೆದು ಮಾರ್ಟ್ ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಗದು, ಬೇಕರಿಯಲ್ಲಿ 50 ಸಾವಿರ ನಗದು ಸೇರಿದಂತೆ ಸೀಗರೇಟ್ ಗಳನ್ನು ದೊಚಿ ಪರಾರಿಯಾಗಿದ್ದಾರೆ.


ಮಧ್ಯ ರಾತ್ರಿ ಸುಮಾರು 1.40 ರಲ್ಲಿ 2 ಬೈಕ್ ಗಳಲ್ಲಿ ಬಂದ 5 ಮಂದಿಯ ಯುವಕರ ಗುಂಪು ಮಾರ್ಟ್ ನ ಬೀಗವನ್ನು ಕಲ್ಲು ಮತ್ತು ರಾಡ್ ನಿಂದ ಹೊಡೆದು ಒಳನುಗ್ಗಿ ಕಳ್ಳತನ ಮಾಡಿದ್ದಾರೆ.


ಮುಖ್ಯ ರಸ್ತೆಗಳ ಅಂಗಡಿ, ಮಾರ್ಟ್ ನಲ್ಲಿ ಕಳ್ಳರು ಕಳ್ಳತನ ನಡೆಸಿರುವುದರಿಂದ ನಾಗರೀಕರು ಭಯಬೀತರಾಗಿದ್ದಾರೆ. ಘಟನೆ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಮಾರ್ಟ್ ನಲ್ಲಿ ಕಳ್ಳರು ಕಳ್ಳತನ ಮಾಡಿರುವ ಬಗ್ಗೆ ಸಿಸಿ ಕ್ಯಾಮರ ದಲ್ಲಿ ದೃಶ್ಯ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net