ಮದ್ದೂರಿನ ವಿವಿಧೆಡೆ ಸರಣಿ ಕಳ್ಳತನ

03M.D.R.4
Published on

ಮದ್ದೂರು: ಪಟ್ಟಣ ವ್ಯಾಪ್ತಿಯ ವಿವಿಧೆಡೆ ಭಾನುವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ದುಷ್ಕರ್ಮಿಗಳು ನಂದಿನಿ ಪಾರ್ಲರ್ ಹಾಗೂ ದಿನಸಿ ಅಂಗಡಿಗಳ ಬಾಗಿಲು ಮುರಿದು ನಗದು ದೋಚಿದ್ದಾರೆ.


ಪಟ್ಟಣದ ಹೊರ ವಲಯದ ಕೆಸ್ತೂರು ಕ್ರಾಸ್ ಬಳಿ ಇರುವ ನಿಡಸಾಲೆ ಗ್ರಾಮದ ಮಧುಸೂದನ್ ಅವರ ಭೈರವೇಶ್ವರ ಎಲೆಕ್ಟ್ರಿಕಲ್ ಹಾರ್ಡ್‌ವೇರ್‌ನಲ್ಲಿ 35 ಸಾವಿರ ರೂ. ಹಾಗೂ ನಿಖಿಲ್‌ಗೆ ಸೇರಿದ ಮಹದೇಶ್ವರ ದಿನಸಿ ಅಂಗಡಿಯಲ್ಲಿ 5 ಸಾವಿರ ರೂ., ಮತ್ತು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಹೇಮಂತ್ ಅವರ ನಂದಿನಿ ಪಾರ್ಲರ್‌ಗಳ ಬೀಗ ಮುರಿದು 17 ಸಾವಿರ ರೂ.ದೋಚಿದ್ದಾರೆ.


ಎಂದಿನಂತೆ ಸೋಮವಾರ ಬೆಳಗ್ಗೆ ಅಂಗಡಿಯ ಬಾಗಿಲುಗಳನ್ನು ತೆರೆಯುವ ವೇಳೆ ಪ್ರಕರಣ ಬಯಲಿಗೆ ಬಂದಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ವೃತ್ತ ನಿರೀಕ್ಷಕ ಕೆ.ಆರ್. ಪ್ರಸಾದ್, ಪಿಎಸ್‌ಐ ಜಮೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net