

ಕಾಸರಗೋಡು: ಉಪ್ಪಳ ಪೇಟೆಯಲ್ಲಿ ನಾಲ್ಕು ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ಸೇರಿದಂತೆ ವಿವಿಧ ಸಾಮಗ್ರಿ ಕಳವುಗೈದಿದ್ದಾರೆ. ಉಪ್ಪಳ ಪೇಟೆಯ ವೈಟ್‌ಮಾರ್ಟ್, ಬಿ.ಕೆ ಮಾರ್ಟ್, ಬ್ಯೂಟಿಪಾರ್ಲರ್, ಸಿಟಿಬ್ಯಾಗ್ ಮುಂತಾದೆಡೆ ಈ ಕಳವು ನಡೆದಿದೆ. ಮುಖ ಮರೆಮಾಚಿದ್ದ ಕಳ್ಳರು ನಾಲ್ಕು ಅಂಗಡಿಗಳ ಬೀಗ ಒಡೆದು ನುಗ್ಗಿ ಕಳವುಗೈಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.