ಕೊರಗರು, ಜೇನು ಕುರುಬರಿಗೆ ಪ್ರತ್ಯೇಕ ಒಳ ಮೀಸಲಾತಿ ಅಗತ್ಯ

blm (4)
Published on

ಕಾರ್ಕಳ: ಕರ್ನಾಟಕದಲ್ಲಿ ಸುಮಾರು 51 ಸಮುದಾಯಗಳು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿವೆ. ವಾಲ್ಮೀಕಿ, ಬೇಡ, ಮರಾಠಿ ನಾಯ್ಕದಂತಹ ಪ್ರಭಾವಿ ಸಮುದಾಯಗಳು ಎಲ್ಲ ಮೀಸಲಾತಿಯ ಅವಕಾಶ ಹಾಗೂ ಸರ್ಕಾರದ ಸವಲತ್ತು ಪಡೆದು ಕೊರಗರಂತಹ ಸಣ್ಣಪುಟ್ಟ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಸರ್ಕಾರ ವಿಳಂಬಿಸದೆ ಕೊರಗರು ಹಾಗೂ ಜೇನು ಕುರುಬರಿಗೆ ಪ್ರತ್ಯೇಕ ಒಳ ಮೀಸಲಾತಿ ನೀಡಬೇಕು ಎಂದು ಕೊರಗ ಸಮುದಾಯದ ಮುಖಂಡ ಪಾಂಗಾಳ ಬಾಬು ಕೊರಗ ಆಗ್ರಹಿಸಿದ್ದಾರೆ.

ಸರ್ಕಾರವೇ ಕೊರಗರು ಮತ್ತು ಜೇನು ಕುರುಬರನ್ನು ನೈಜ ದುರ್ಬಲ ಬುಡಕಟ್ಟು ಸಮುದಾಯಗಳೆಂದು ಹಿಂದೆಯೇ ಗುರುತಿಸಿದೆ. ಆದರಿಂದ ಈ ಎರಡು ಆದಿಮ ಬುಡಕಟ್ಟುಗಳನ್ನು ಪ್ರತ್ಯೇಕಿಸಿ, ಒಳ ಮೀಸಲಾತಿ ಘೋಷಿಸಬೇಕು. ಆಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬಾಬು ಕೊರಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net