ಸ್ವಸ್ಥ, ಸುಂದರ ಸಮಾಜದಿಂದ ಬದುಕು ಪರಿಪೂರ್ಣ

byn (2)
Published on

ಬೈಂದೂರು: ಸಮಾಜಮುಖಿ ಚಿಂತನೆಯನ್ನು ಬೆಳೆಸಿಕೊಂಡು ಸ್ವಸ್ಥ, ಸುಂದರ ಸಮಾಜ ನಿರ್ಮಾಣಕ್ಕೆ ತಮ್ಮನ್ನು ತೊಡಗಿಸಿಕೊಂಡಲ್ಲಿ ಮಾತ್ರ ಒಬ್ಬ ವ್ಯಕ್ತಿಯ ಬದುಕು ಪರಿಪೂರ್ಣವಾಗಬಲ್ಲದು. ಅಂತಹ ಮನಸ್ಥಿತಿಯನ್ನು ಇಂತಹ ಶಿಬಿರಗಳು ನಿರ್ಮಾಣ ಮಾಡಬಲ್ಲವು ಎಂದು ಹೇರೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ಪೂಜಾರಿ ತಿಳಿಸಿದರು. ರಾಗಿಹಕ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಹೇರೂರು ಗ್ರಾಪಂ ಅಧ್ಯಕ್ಷೆ ಗೀತಾ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಬದುಕಿನಲ್ಲಿ ಶಿಸ್ತು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸೇವಾ ಮನೋಭಾವನೆಯಿಂದ ಸತ್ಕಾರ್ಯದಲ್ಲಿ ತೊಡಗಿಸಿಕೊಂಡಾಗ ಸಾಮಾಜಿಕ ಜವಾಬ್ದಾರಿ ಮತ್ತು ನಾಯಕತ್ವದ ಗುಣಗಳು ಬೆಳೆಯಲು ಸಾಧ್ಯ ಎಂದರು. ಕಾಲೇಜು ಪ್ರಾಂಶುಪಾಲ ವೆಂಕಟರಮಣ ಬಿ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ರಾಜಶೇಖರ್ ಬಿ., ಸದಸ್ಯ ಶ್ರೀನಿವಾಸ್ ಶೇಟ್, ರಾಗಿಹಕ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಜಯಪ್ರಕಾಶ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಪೂಜಾರಿ, ಉಪಾಧ್ಯಕ್ಷೆ ಗುಲಾಬಿ ಪೂಜಾರಿ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ರಮೇಶ್ ಪೂಜಾರಿ, ಗೌರವಾಧ್ಯಕ್ಷ ನಾಗರಾಜ ಬಿಡುವಾಳ, ಉದ್ಯಮಿ ರವೀಂದ್ರ ಪೂಜಾರಿ, ಹಿರಿಯರಾದ ಶಾಂತಾರಾಮ ಶೆಟ್ಟಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ಪ್ರಸನ್ನ ಮಯ್ಯ, ಉಪನ್ಯಾಸಕರಾದ ಉದಯ್‌ಕುಮಾರ್ ಎಂ.ಪಿ., ಪೂರ್ಣಿಮಾ, ಗುರುರಾಜ್, ದೀಪಕ್ ಭಟ್ ಇದ್ದರು. ಹರೀಶ್ ಕೋಟ್ಯಾನ್ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಸತೀಶ್ ವಂದಿಸಿದರು. ರಾಘವೇಂದ್ರ ಗುಡಿಗಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net