

ಉಪ್ಪಳ: ಮೇರು ಕಲೆ ಯಕ್ಷಗಾನದಲ್ಲಿ ಸಾಧನೆ ಮೆರೆದ ಹಿರಿಯ ಕಲಾವಿದರನ್ನು ಸನ್ಮಾನಿಸಿದ ತುಳು ಅಕಾಡೆಮಿಯ ಕೆಲಸ ಶ್ಲಾಘನೀಯ ಎಂದು ಶ್ರೀಮದ್ ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಕೇರಳ ತುಳು ಅಕಾಡೆಮಿ ವತಿಯಿಂದ ಉಪ್ಪಳ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಹಿರಿಯ ಯಕ್ಷಗಾನ ಕಲಾವಿದರ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲರನ್ನೂ ಒಟ್ಟು ಸೇರಿಸಿ ಹಿರಿಯ ಯಕ್ಷಗಾನ ಕಲಾವಿದರನ್ನು ಗೌರವಿಸುವ ಕೆಲಸ ಅಭಿನಂದನಾರ್ಹ ಎಂದರು. ಉದುಮ ಶಾಸಕ ಸಿ.ಎಚ್.ಕುಂಞಂಬು ಸಮಾರಂಭ ಉದ್ಘಾಟಿಸಿದರು. ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ, ತಾಳಮದ್ದಳೆ ಅರ್ಥಧಾರಿ ಡಾ.ರಮಾನಂದ ಬನಾರಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಗಿಳಿವಿಂಡು ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್, ಡಿ.ಬೂಬ, ಎಂ.ಶಂಕರ್ ರೈ ಮಾಸ್ತರ್, ಯೋಗೀಶ್ ರಾವ್ ಚಿಗುರುಪಾದೆ, ಎಂ.ನಾ.ಚಂಬಲ್ತಿಮಾರ್, ಕುಶಾಲಾಕ್ಷಿ ವಿ.ಕುಲಾಲ್ ಉಪಸ್ಥಿತರಿದ್ದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿ. ವಂದಿಸಿದರು. ರಂಗಭೂಮಿ ಕಲಾವಿದ ರಾಮಕೃಷ್ಣ ಕಡಂಬಾರ್ ನಿರೂಪಿಸಿದರು.
ಹಿರಿಯ ಯಕ್ಷಗಾನ ಕಲಾವಿದರಾದ ಗೋಪಾಲಕೃಷ್ಣ್ಣ ಭಟ್, ವೆಂಕಟಕೃಷ್ಣ ಮಧೂರು, ವಾಸುದೇವ ಭಟ್, ನಾರಾಯಣ ಮಣಿಯಾಣಿ, ಸದಾನಂದ ರಾವ್, ರಘುನಾಥ ಶೆಟ್ಟಿ, ಗಣಪತಿ ಶಾಸ್ತ್ರಿ ಕುರಿಯ, ನಾರಾಯಣ ಮಣಿಯಾಣಿ, ರಾಮ ಭಟ್ ಸಬ್ಬಣ್ಣಕೋಡಿ, ಐತ್ತಪ್ಪ, ಶಾಮ ಭಟ್, ರಾಧಾಕೃಷ್ಣ್ಣ ಮಾಸ್ತರ್, ಕೆ.ವಿ.ರಮೇಶ್ ಕಾಸರಗೋಡು, ರಾಮ ಸಾಲ್ಯಾನ್, ಗಣಪತಿ ಭಟ್, ಐತ್ತಪ್ಪ ಟೈಲರ್ ಕೊಡಂಗೆ, ಬಾಲಕೃಷ್ಣ್ಣ ಗೌಡ, ನಾರಾಯಣ ಶೆಟ್ಟಿ ಪರಪ್ಪು, ಸಂಜೀವ ಶೆಟ್ಟಿ, ಮೊಹಮ್ಮದ್, ರಮೇಶ್ ಭಟ್, ರಾಮ ಜೋಗಿ, ಭಾಸ್ಕರ, ತಿಮ್ಮಪ್ಪ ರೈ,. ಶಿವಶಂಕರ ಭಟ್, ನಾರಾಯಣ ಪೂಜಾರಿ, ಶುಭಾನಂದ ಶೆಟ್ಟಿ, ಮೋಹನ, ಈಶ್ವರ ನಾಯ್ಕ ಅವರನ್ನು ಸನ್ಮಾನಿಸಲಾಯಿತು..
ಶ್ರೀಕೃಷ್ಣ ಭಟ್ ದೇವಕಾನ ನೇತೃತ್ವದಲ್ಲಿ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.