

ಬೆಂಗಳೂರು: ಮೊನ್ನೆಮೊನ್ನೆಯಷ್ಟೇ ಜನ್ಮದಿನಾಚರಣೆಯನ್ನು ಕಂಡಿದ್ದ ಪತ್ರಕರ್ತ ಸಾಹುಕಾರ್ ಚಂದ್ರಶೇಖರ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾಗಿರುವ ಇವರು ಪತ್ರಕರ್ತರ ವಲಯದಲ್ಲಿ ಸಾ.ಚ. (ಸಾಹುಕಾರ್ ಚಂದ್ರಶೇಖರ್ ರಾವ್) ಎಂದೇ ಹೆಸರಾಗಿದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಂದು ಚಿಕಿತ್ಸೆ ಫಲಿಸದೆ ಅಸುನೀಗಿದರು.
ಇವರು ಸುದ್ದಿಗೋಷ್ಠಿಯಲ್ಲಿ ಯಾವುದೇ ಮುಲಾಜಿಲ್ಲದೆ ಅತಿ ತೀಕ್ಷ್ಣವಾದ ಪ್ರಶ್ನೆಗಳನ್ನು ಕೇಳುವಂಥವರಾಗಿದ್ದರು. ಇವರು 'ನೆನಪು ಮಾಸುವ ಮುನ್ನ' ಎಂಬ ಕೃತಿಯನ್ನು ಬರೆದಿದ್ದರು. ಬುಧವಾರವಷ್ಟೇ (ಆ.4) ಇವರ ಜನ್ಮದಿನವಿತ್ತು.