

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಧರಿಯಾಪುರ-ಕೋಟನೂರ ಜಿಡಿಎ ಬಡಾವಣೆಯ ಥೀಮ್ ಪಾರ್ಕ್ ಕಟ್ಟಡದಲ್ಲಿ ಹಿರಿಯ ಪತ್ರಕರ್ತ, ಪರಿಸರ ಪ್ರೇಮಿ ಹಾಗೂ ಲೇಖಕ ಕೆ.ಎನ್. ರಡ್ಡಿ(೫೫) ಮಂಗಳವಾರ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿ, ಪುತ್ರ, ಪುತ್ರಿ ಸೇರಿ ಬಂಧು-ಬಳಗ ಅಗಲಿದ್ದಾರೆ. ರಾಯಚೂರಿನಲ್ಲಿ ಸ್ಥಾಪಿಸಿದ್ದ ಶಿಕ್ಷಣ ಸಂಸ್ಥೆ ಕರೊನಾ ಅವಧಿಯಲ್ಲಿ ತೀವ್ರ ತೀರಾ ನಷ್ಟಕ್ಕೆ ಸಿಲುಕಿತ್ತು. ಎಷ್ಟೆಲ್ಲ ಪ್ರಯತ್ನ ಮಾಡಿದರೂ ಚೇತರಿಸಿಕೊಳ್ಳಲಿಲ್ಲ. ಅದಕ್ಕಾಗಿ ಮಾಡಿದ್ದ ಸಾಲ ಮತ್ತು ತಮ್ಮ ಕನಸಿನ ಶಿಕ್ಷಣ ಸಂಸ್ಥೆ ಯಶಸ್ವಿಯಾಗಲಿಲ್ಲ ಎಂದು ಘಾಸಿಗೊಂಡು ಸಾವಿಗೆ ಶರಣಾಗಿರಬಹುದು ಎನ್ನಲಾಗುತ್ತಿದೆ.
ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಅವರು, ಹಲವು ಕೃತಿಗಳನ್ನು ಸಹ ರಚಿಸಿದ್ದರು. ಇತ್ತೀಚೆಗೆ ಹೈದರಾಬಾದ್ ಕೇಂದ್ರ ಸ್ಥಾನವಾಗಿಸಿ ಪ್ರಕಟಗೊಳ್ಳುತ್ತಿದ್ದ ಆಂಗ್ಲ ದೈನಿಕವೊಂದು ನಷ್ಟದಿಂದಾಗಿ ಮುಚ್ಚಿತ್ತು. ಅದರಲ್ಲಿ ಕೆಲಸ ಮಾಡುತ್ತಿದ್ದ ಅವರು ನಾಲ್ಕೆÊದು ವರ್ಷಗಳಿಂದ ಕೆಲಸವಿಲ್ಲದೆ ನೊಂದುಕೊAಡಿದ್ದರು. ಒಂದೆಡೆ ಉದ್ಯೋಗ ಇಲ್ಲದಿರುವುದು, ಇನ್ನೊಂದೆಡೆ ಕಟ್ಟಿದ ಶಿಕ್ಷಣ ಸಂಸ್ಥೆಯ ನಷ್ಟ, ಸಾಲದ ಚಿಂತೆಯಲ್ಲೇ ಕೊರಗುತ್ತಿದ್ದರು.
ಧರಿಯಾಪುರ ಗಾರ್ಡನ್‌ನಲ್ಲಿ ಕೀಟನಾಶಕ ಸೇವಿಸಿದ ಬಳಿಕ ತೀವ್ರ ಯಾತನೆ ಶುರುವಾಗಿದ್ದು, ಕೀಟನಾಶಕ ಬಾಟಲ್ ತೆರೆಯಲು ತಂದಿದ್ದ ಚಾಕುವಿನಿಂದ ಕೆಲವೆಡೆ ರಕ್ತ ನಾಳ ಕತ್ತರಿಸಿಕೊಳ್ಳಲು ಚುಚ್ಚಿಕೊಂಡಿದ್ದಾರೆ. ಬಳಿಕ ಅಲ್ಲಿನ ಹಾಳು ಬಿದ್ದ ಕಟ್ಟಡದ ಮೇಲಿಂದ ಬಿದ್ದು ಪ್ರಾಣ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಸರಿಯಾಗಿ ಜನರೊಂದಿಗೆ ಬೆರೆಯುತ್ತಿರಲಿಲ್ಲ. ಸದಾ ತಮ್ಮ ಶಾಲೆಯ ನಷ್ಟದ ಬಗ್ಗೆ ಯೋಚಿಸುತ್ತಿದ್ದರು. ಒಬ್ಬರೆ ಕುಳಿತುಕೊಂಡು ಚಿಂತೆಯಲ್ಲಿ ತೊಡಗುತ್ತಿದ್ದರು. ಸದಾ ನೋವಿನಲ್ಲಿರುತ್ತಿದ್ದರು. ಕೊಂಚ ನೋವಿನಿಂದಲೇ ಮಂಗಳವಾರ ಸಂಜೆ ಮನೆಯಿಂದ ಹೊರಗಡೆ ಹೋಗಿ ಬರುವುದಾಗಿ ಹೋಗಿದ್ದರು. ರಾತ್ರಿ ೮ ಗಂಟೆಯಾದರು ಮನೆಗೆ ಮರಳಿ ಬಾರದೆ ಇದ್ದಾಗ ಮನೆಯವರು, ಸ್ನೇಹಿತರು, ಅಕ್ಕಪಕ್ಕದವರು, ಹಿತೈಷಿಗಳು ಸೇರಿಕೊಂಡು ಹುಡುಕಾಡಲು ಶುರುವಿಟ್ಟಿದ್ದಾರೆ.
ನಿತ್ಯ ವಾಕಿಂಗ್ ಮಾಡುತ್ತಿದ್ದ ಥೀಮ್ ಪಾರ್ಕ್ ಬಳಿಯಲ್ಲಿ ಕೆಲವು ಹುಡುಕಾಡಿಕೊಂಡು ಹೋದಾಗ ಅಲ್ಲಿ ಅವರ ಬೈಕ್ ಇರುವುದು ಪತ್ತೆಯಗಿದೆ. ಆಗ ಇಲ್ಲಿ ಎಲ್ಲೋ ಇರಬಹುದು ಎಂದುಕೊAಡು ಹುಡುಕಾಟ ಆರಂಭಿಸಿದ್ದಾರೆ. ತಡರಾತ್ರಿ ಅಲ್ಲಿನ ಹಾಳು ಬಿದ್ದ ಕಟ್ಟಡದಲ್ಲಿ ಬಳಿಯಲ್ಲಿ ಶವ ಪತ್ತೆಯಾಗಿದೆ.
ಸುದ್ದಿ ಅರಿಯುತ್ತಲೇ ತಡರಾತ್ರಿ ಪೊಲೀಸ್ ಆಯುಕ್ತ ಚೇತನ ಆರ್. ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಇನ್‌ಸ್ಪೆಕ್ಟರ್ ಅರುಣಕುಮಾರ ಮುರಗುಂಡಿ ಮತ್ತು ಸಿಬ್ಭಂದಿ ಭೇಟಿ ನೀಡಿ ಪರಿಶೀಲಿಸಿದರು.