

ತುಮಕೂರು: ಜಿಲ್ಲೆ ಈ ಬಾರಿ ಫಲಿತಾಂಶ ಹಲವು ವಿಶೇಷಗಳನ್ನು ಬರೆಯಿತು. ಮಾಜಿ ಸಚಿವ ಟಿ.ಬಿ.ಜಯಚಂದ್ರ 7ನೇ ಬಾರಿ ಶಕ್ತಿ ಸೌಧ ಪ್ರವೇಶಿಸುವ ಮೂಲಕ ಜಿಲ್ಲೆಯ ಮಟ್ಟಿಗೆ ಹೊಸ ದಾಖಲೆ ಬರೆದರು. ಇದು ಸೇರಿ 11 ಚುನಾವಣೆಗಳನ್ನು ಟಿಬಿಜೆ ಎದುರಿಸಿದ್ದಾರೆ.
ಇನ್ನೂ ಸಿಎಂ ರೇಸ್‌ನಲ್ಲಿರುವ ಡಾ.ಜಿ.ಪರಮೇಶ್ವರ 6ನೇ ಬಾರಿ ವಿಧಾನಸಭೆ ಪ್ರವೇಶಿಸಿದರೆ, ಸೋಲಿಲ್ಲದ ಸರದಾರ ಎಸ್.ಆರ್.ಶ್ರೀನಿವಾಸ್ ಸತತ 5ನೇ ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ, ಸಿ.ಬಿ.ಸುರೇಶ್‌ಬಾಬು 4ನೇ ಬಾರಿ, ಕಾಂಗ್ರೆಸ್‌ನ ಕೆ.ಷಡಕ್ಷರಿ, ಕೆ.ಎನ್.ರಾಜಣ್ಣ , ಬಿಜೆಪಿಯ ಬಿ.ಸುರೇಶಗೌಡ 3ನೇ ಬಾರಿ ಶಕ್ತಿ ಸೌಧಕ್ಕೆ ಪ್ರವೇಶ ಪಡೆದಿದ್ದಾರೆ. ಎರಡನೇ ಪ್ರಯತ್ನದಲ್ಲಿ ಪಾವಗಡದ ಎಚ್.ವಿ.ವೆಂಕಟೇಶ್ ಶಕ್ತಿ ಸೌಧ ಪ್ರವೇಶಿಸಿದ್ದಾರೆ.