ಹಿರಿಯ ನಾಗರಿಕರ ವೇದಿಕೆ ಮಾಸಿಕ ಸಭೆ

meeting
ಹಿರಿಯ ನಾಗರಿಕರ ವೇದಿಕೆ ಕುಂದಾಪುರ ಮಾಸಿಕ ಸಭೆಯಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ವಿಷ್ಣುಮೂರ್ತಿ ಉಡುಪ, ನಿವೃತ್ತ ಶಿಕ್ಷಕ ಕಿರಣ್ ಕುಮಾರ್, ಬಾಷಾ ಟ್ರಾನ್ಸ್‌ಪೋರ್ಟ್‌ನ ವೆಂಕಟರಮಣ ಹಾಗೂ ಗೌರವಾಧ್ಯಕ್ಷ ಬಿ.ಭೋಜರಾಜ ಶೆಟ್ಟಿ ಅವರನ್ನು ಗೌರವಿಸಲಾಯಿತು
Published on

ಕುಂದಾಪುರ: ಹಿರಿಯ ನಾಗರಿಕರ ವೇದಿಕೆ ಕುಂದಾಪುರ ಮಾಸಿಕ ಸಭೆ ಕುಂದಾಪುರದ ಕುಂದೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ನಡೆಯಿತು.

ವೇದಿಕೆ ಅಧ್ಯಕ್ಷ ಎನ್.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಸದಸ್ಯತ್ವ ಸ್ವೀಕರಿಸಿದ ನಿವೃತ್ತ ಬ್ಯಾಂಕ್ ಅಧಿಕಾರಿ ವಿಷ್ಣುಮೂರ್ತಿ ಉಡುಪ, ನಿವೃತ್ತ ಶಿಕ್ಷಕ ಕಿರಣ್ ಕುಮಾರ್, ಬಾಷಾ ಟ್ರಾನ್ಸ್‌ಪೋರ್ಟ್‌ನ ವೆಂಕಟರಮಣ, ಗೌರವಾಧ್ಯಕ್ಷ ಬಿ.ಭೋಜರಾಜ ಶೆಟ್ಟಿ ಅವರನ್ನು ಗೌರವಿಸಲಾಯಿತು. ಎಂ.ಜಿ.ಮಲ್ಲಪ್ಪ, ಸುಬ್ರಾಯ ಬಿ., ಸೂಲ್ಯಣ್ಣ ಶೆಟ್ಟಿ, ವಿ.ಭಾಸ್ಕರ ಶೆಟ್ಟಿ, ಜಿ.ಗಣಪಯ್ಯ, ಸಿ.ಎಚ್.ಜಗನ್ನಾಥ ಶೆಟ್ಟಿ, ಎಂ.ದಿನಕರ ಶೆಟ್ಟಿ, ರಾಮದಾಸ್ ನಾಯ್ಕ ಉಪಸ್ಥಿತರಿದ್ದರು. ವಿನಯಾ ಶೆಣೈ ಪ್ರಾರ್ಥಿಸಿದರು. ಕಾರ್ಯದರ್ಶಿ ಬಾಬು ಪೂಜಾರಿ ವರದಿ ವಾಚಿಸಿದರು. ಖಜಾಂಚಿ ಜಯಲಕ್ಷ್ಮೀ ಕೊತ್ವಾಲ್ ಲೆಕ್ಕಪತ್ರ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net