

ಹೆಬ್ರಿ: ಹಾಸನದ ಮಂಗಳೂರು ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿದ ಮೈಸೂರು ವಿಭಾಗ ಮಟ್ಟದ 14ರ ಒಳಗಿನ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಶಂಕರಪುರ ಸೇಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ತೃತೀಯ ಸ್ಥಾನ ಪಡೆದಿದೆ.
ಉಡುಪಿ ಜಿಲ್ಲೆಯನ್ನು ಶಂಕರಪುರ ಸೇಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲೆ ಅನುಷಾ, ರೋಶ್ನಿ ಥಾಮಸ್ ಸಾಂಬ್ರಣಿಕರ್, ಮುಸ್ಕಾನ್ ಭಾನು, ನಿಶ್ಚಿತಾ ಎಸ್.ಪೂಜಾರಿ, ಖುಷಿ, ಧೃತಿ ಜಗದೀಶ್ ಪುತ್ರನ್, ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೀಕ್ಷಾ, ಸುಚಿತಾ, ಪ್ರಣೀತಾ, ಸಾನ್ವಿಕಾ, ದಿತ್ಯಾ ಎ.ಶೆಟ್ಟಿ ಪ್ರತಿನಿಧಿಸಿದ್ದಾರೆ.
ಶಾಲಾ ಸಂಚಾಲಕ ಡಾ.ಪ್ರಕಾಶ್ ಅನಿಲ್ ಕ್ಯಾಸ್ತಲಿನೊ, ಕೋಚ್ ಹೃದಯ ಶೆಟ್ಟಿ, ಪ್ರದೀಪ್, ಜಗದೀಶ್, ಕಾರ್ತಿಕ್, ಶಾಲಾ ಮುಖ್ಯಸ್ಥೆ ಐರಿನ್ ಕ್ಲಾರಾ ಡಿಸೋಜ, ಶಿಕ್ಷಕರ ವೃಂದ, ತಂಡದ ವ್ಯವಸ್ಥಾಪಕಿ ಮರಿಯ ಅನಿತ ಮೆಂಡೋನ್ಸ, ರೋಯಲ್ ಫರ್ನಾಂಡಿಸ್, ಜೋಯಲ್ ವಾಜ್, ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಹರೀಶ ಪೂಜಾರಿ ಎಸ್., ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಶೆಟ್ಟಿ, ಚಿತ್ರಾ ಪೂಜಾರಿ, ನವೀನ್, ದಿವ್ಯಾ ಶೆಟ್ಟಿ ಕಾರ್ಕಳ ಸಹಕರಿಸಿದರು.