ಕ್ರಿಯಾಶೀಲರಾಗಿ ಸಮಾಜಸೇವೆ

sanmana
ಹಿರಿಯ ನಾಗರಿಕ ವೇದಿಕೆ ವಾರ್ಷಿಕ ಮಹಾಸಭೆಯಲ್ಲಿ ಹಿರಿಯರಾದ ಡಿ.ನರಸಿಂಹ ಯಡಿಯಾಳ್ ಹಳ್ಳಿಹೊಳೆ, ಸಂಜೀವ ಶೆಟ್ಟಿ ಚಕ್ತೆಬೇರು ಮತ್ತು ಸಾವಿತ್ರಿ ಐತಾಳ್ ಸಿದ್ದಾಪುರ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ, ಗೌರವಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು
Published on

ಸಿದ್ದಾಪುರ: ಹಿರಿಯ ನಾಗರಿಕರು ಕ್ರಿಯಾಶೀಲರಾಗಿರಬೇಕು. ಸಮಾಜಕ್ಕೆ ಸೇವೆ ಸಲ್ಲಿಸುವಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕುಂದಾಪುರ ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಹೇಳಿದರು.

ಸಂಘದ ಸ್ವಂತ ಕಟ್ಟಡ ಅನುಭವ ಮಂಟಪದಲ್ಲಿ ಇತ್ತೀಚೆಗೆ ಹಿರಿಯ ನಾಗರಿಕ ವೇದಿಕೆ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಅಧ್ಯಕ್ಷ ಡಿ.ಗೋಪಾಲಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಡಿ.ನರಸಿಂಹ ಯಡಿಯಾಳ್ ಹಳ್ಳಿಹೊಳೆ, ಸಂಜೀವ ಶೆಟ್ಟಿ ಚಕ್ತೆಬೇರು ಮತ್ತು ಸಾವಿತ್ರಿ ಐತಾಳ್ ಸಿದ್ದಾಪುರ ಅವರನ್ನು ಸನ್ಮಾನಿಸಲಾಯಿತು. ದಿನಕರ ತೋಳಾರ್, ಸಾವಿತ್ರಿ ಐತಾಳ್ ಮಾತನಾಡಿದರು. ಕಾರ್ಯದರ್ಶಿ ಎಚ್.ಭೋಜ ಶೆಟ್ಟಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. 2023-24ನೇ ಸಾಲಿನಲ್ಲಿ ನಿಧನರಾದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗೌರವಾಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಎಸ್.ದೇವದಾಸ ಭಟ್ ಸ್ವಾಗತಿಸಿದರು. ತೇಜಪ್ಪ ಶೆಟ್ಟಿ ವಂದಿಸಿದರು. ರಾಜೀವ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net