ಕೋಡಿ ಕನ್ಯಾಣ ಸಹಕಾರಿ ಸಂಘ ಸಭೆ

sabhe
ಶ್ರೀದೇವಿ ಮಾರಿಕಾಂಬ ಸೌಹಾರ್ದ ಸಹಕಾರಿ ಸಂಘ ಕೋಡಿ ಕನ್ಯಾಣ ವಾರ್ಷಿಕ ಸಾಮಾನ್ಯ ಸಭೆ ಕೃಷ್ಣ ಮಾಸ್ತರ್ ಅಧ್ಯಕ್ಷತೆಯಲ್ಲಿ ಜರುಗಿತು
Published on

ಕೋಟ: ಶ್ರೀದೇವಿ ಮಾರಿಕಾಂಬ ಸೌಹಾರ್ದ ಸಹಕಾರಿ ಸಂಘ ಕೋಡಿ ಕನ್ಯಾಣ ವಾರ್ಷಿಕ ಸಾಮಾನ್ಯ ಸಭೆ ಮಂಗಳವಾರ ಜರುಗಿತು.
ಸಂಘದ ಅಧ್ಯಕ್ಷ ಕೆ.ಕೃಷ್ಣ ಮಾಸ್ತರ್ ಎರಡು ವರ್ಷಗಳಲ್ಲಿ ಸಂಸ್ಥೆಯ ಪ್ರಗತಿ ವಿವರಿಸಿ, ಸಂಘ 3,37,57,098ರೂ. ವಹಿವಾಟು ನಡೆಸಿದ್ದು, 5,76,00,000 ರೂ. ಸಾಲ ನೀಡಿದೆ. ಹೊರಬಾಕಿ 3,12,05,450 ರೂ., 4,03,774 ರೂ. ಲಾಭಾಂಶದೊಂದಿಗೆ 45 ಕೋಟಿ ರೂ. ವ್ಯವಹಾರ ನಡೆಸಿದೆ ಎಂದರು.

ಸಹಕಾರಿ ಸಂಘಗಳ ರಾಜ್ಯಮಟ್ಟದ ನಿರ್ದೇಶಕ ಮಂಜುನಾಥ ಎಸ್.ಕೆ., ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್., ಉಪಾಧ್ಯಕ್ಷ ಅರುಣ್ ಜಿ.ಕುಂದರ್, ನಿರ್ದೇಶಕರಾದ ಕೃಷ್ಣಪ್ಪ ಬಂಗೇರ, ಪ್ರಭಾಕರ ಬಂಗೇರ, ವಿನೋದ್ ಕುಂದರ್, ಹರ್ಷ ಕೆ.ಬಿ., ಶುಭಕರ ಕುಂದರ್, ಕರುಣಾಕರ ಖಾರ್ವಿ, ಸುಧಾಕರ ಎಸ್.ಕಾಂಚನ್, ಗುಲಾಬಿ, ಪುಷ್ಪಲತಾ ಎಸ್.ಸುವರ್ಣ, ಸುಜಾತಾ ಎಸ್. ಇದ್ದರು.

ಸಂಘ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಪವನ್ 2023-2024ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು, ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ನಿತೀಶ್ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net