ಮತದಾನ ಮಾಡಿಸಿಕೊಳ್ಳಲು ಮನೆಗೆ ಬಂದಾಗ ಪ್ರಾಣಬಿಟ್ಟ ವೃದ್ಧೆ! ಸಂತಾಪ ಸೂಚಿಸಿದ ಚುನಾವಣಾ ಅಧಿಕಾರಿಗಳು

WhatsApp-Image-2024-04-25-at-12.32.02-PM
Published on

ಕೊಪ್ಪಳ: ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿತ್ತು. ಈ ಹಿನ್ನೆಲೆ ರಾಜ್ಯಾದ್ಯಂತ ಚುನಾವಣಾ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ, ವೃದ್ಧರಿಂದ ಮತದಾನ ಮಾಡಿಸುತ್ತಿದ್ದಾರೆ.

ಇದೇ ರೀತಿ ಕೊಪ್ಪಳದಲ್ಲಿಯೂ ಮನೆ ಮನೆಗೆ ತೆರಳಿದ‌ ಚುನಾವಣಾ ಅಧಿಕಾರಿಗಳು ಮತದಾನ ಮಾಡಿಸಿಕೊಳ್ಳುಲು ಹಲಗೇರಿ ಗ್ರಾಮದ ಪಾರ್ವತಮ್ಮ ದೊಡ್ಡಬಸಪ್ಪ ಸಜ್ಜನ (95) ಅವರ ನಿವಾಸಕ್ಕೆ ಭೇಟಿ ನೀಡಿದ ಸಮಯಕ್ಕೆ ವೃದ್ಧೆ ಸಾವನ್ನಪ್ಪಿದ್ದಾರೆ.

ಹಿರಿಯ ಮತದಾರರ ಮತದಾನ ಮಾಡಿಕೊಳ್ಳುವ ಸಲುವಾಗಿ ಮನೆಯ ಬಾಗಿಲಿಗೆ ಬಂದಾಗ ವೃದ್ಧೆ ನಿಧನರಾದ ಘಟನೆ ಅಧಿಕಾರಿಗಳಲ್ಲಿ ಅಚ್ಚರಿ ಮೂಡಿಸಿತು. ಸಹಾಯಕ ಚುನಾವಣಾ ಅಧಿಕಾರಿ ತಾ.ಪಂ. ಇಒ ದುಂಡಪ್ಪ ತುರಾದಿ, ಗ್ರಾ.ಪಂ. ಪಿಡಿಒ ಅಶೋಕ ರಾಂಪೂರ ಇತರರು‌ ತೆರಳಿದಾಗ ಘಟನೆ ಸಂಭವಿಸಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅಜ್ಜಿ ಮತದಾನಕ್ಕೂ ಮುನ್ನವೇ ಜೀವ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net