ಕವನ ಕಳುಹಿಸಿ ಬಹುಮಾನ ಗೆಲ್ಲಿರಿ

Published on

ಬೆಟ್ಟದಪುರ: ಎಚ್.ಪಿ. ಕ್ರಿಯೇಷನ್ ಮತ್ತು ಬ್ಯಾಂಕ್ ಸಿನಿಮಾ ತಂಡದಿಂದ ಕರುನಾಡ ಕವನ ರಾಶಿ ಎಂಬ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ರಾಜ್ಯದಲ್ಲಿ ಇರುವ ಕವಿಗಳು, ಕವನ ರಚನೆ ಮಾಡುವರು ಭಾಗವಹಿಸಬಹುದಾಗಿದೆ. ಮೊದಲ ಬಹುಮಾನ ಹತ್ತು ಸಾವಿರ ರೂ., ಎರಡನೇ ಬಹುಮಾನ ಐದು ಸಾವಿರ ರೂ. ಮತ್ತು ಮೂರನೇ ಬಹುಮಾನ ಎರಡೂವರೆ ಸಾವಿರ ರೂ. ಇರುತ್ತೆ. ಆಸಕ್ತರು ಆಗಸ್ಟ್ 31ರ ಒಳಗೆ ಕಳುಹಿಸಬೇಕಿದೆ. ವಿಜೇತರಿಗೆ ಸಿನಿಮಾ ಗೀತೆ ರಚನೆ ಮಾಡುವ ಅವಕಾಶ ನೀಡಲಾಗುವುದು ಎಂದು ನಿರ್ದೇಶಕ ಎಚ್.ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net