ಹೆಣ್ಣುಮಕ್ಕಳನ್ನು ನೋಡುವ ದೃಷ್ಟಿ ಬದಲಾಗಲಿ

Published on

ವಿಜಯವಾಣಿ ಸುದ್ದಿಜಾಲ ಕಕ್ಕೇರಾ

ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಬದಲಾದರೆ ಸಮಾಜದಲ್ಲಿ ಹೊಸ ಚರಿತ್ರೆಯನ್ನೇ ಸೃಷ್ಟಿಸಬಹುದು ಎಂದು ಪೊಲೀಸ್ ಅಧಿಕಾರಿ ಚೇತನಕುಮಾರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ ಶನಿವಾರ ಹಮ್ಮಿಕೊಂಡ ನಾವು ಮನುಜರು ಕರ‍್ಯಕ್ರಮದಡಿ ಹೆಣ್ಣು ಮಕ್ಕಳ ಸಮಾನತೆ ಹಾಗೂ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದ ಅವರು, ಈ ಹಿಂದೆ ಹೆಣ್ಣು ಮಗುವೊಂದು ಜನಿಸಿದರೆ ಹುಣ್ಣು ಹುಟ್ಟಿತು ಎಂದು ಹೇಳುವ ಮಾತು ಈಗ ಸುಳ್ಳಾಗಿ ಹೆಣ್ಣಿನಿಂದಲೇ ಇಹವು ಹೆಣ್ಣಿನಿಂದಲೇ ಸಕಲ ಸಂಪತ್ತು ಎನ್ನುವ ಕಾಲ ಸೃಷ್ಟಿಯಾಗಿದೆ ಎಂದರು.

ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಪೂಜ್ಯನೀಯ ಸ್ಥಾನವಿದ್ದು, ಫಾರಿನ್ ಪ್ಯಾಷನ್‌ಗೆ ಮಾರು ಹೋಗದೇ ನಮ್ಮ ದೇಶದ ಭವ್ಯ ಪರಂಪರೆ ಮತ್ತು ಸಂಸ್ಕೃತಿಯನ್ನು ಯಾರು ಮರೆಯಬಾರದು. ಹೆಣ್ಣು ಮಕ್ಕಳನ್ನು ನಾವು ಪೂಜ್ಯನೀಯ ಭಾವನೆಯಿಂದ ನೋಡಿದರೆ ಸಮಾಜದಲ್ಲಿ ಹೊಸ ಚರಿತ್ರೆ ಸೃಷ್ಟಿಸಲು ಸಾಧ್ಯ. ಹೆಣ್ಣುಮಕ್ಕಳು ಶಿಕ್ಷಣ ಪಡೆದು ರಾಜ್ಯ ಮತ್ತು ರಾಷ್ಟçದ ಪ್ರಗತಿಗೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು. ಮುಖ್ಯಶಿಕ್ಷಕ ಬಸಯ್ಯಸ್ವಾಮಿ, ಶಿಕ್ಷಕರಾದ ದೇವಿಂದ್ರಪ್ಪ ಆಲದಾರ್ತಿ, ದೇವಿಂದ್ರಪ್ಪ ಸಜ್ಜನ್, ಗಣೇಶ ಬಸಾಪೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net