ಯಕ್ಷ ರಂಗಾಯಣದಿಂದ ವಿಚಾರ ಸಂಕಿರಣ

vichara
Published on

ಕಾರ್ಕಳ: ಯಕ್ಷ ರಂಗಾಯಣ ಕಾರ್ಕಳ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ನಮ್ಮ ಸಂವಿಧಾನದ ಆಕೃತಿ ಮತ್ತು ಆಶಯ ಎಂಬ ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.

ಸಂವಿಧಾನದ ರಚನೆ, ಚಾರಿತ್ರಿಕ ನೋಟ ವಿಷಯದ ಬಗ್ಗೆ ರಾಜ್ಯಶಾಸ್ತ್ರ ವಿಭಾಗ ನಿವೃತ್ತ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಮಾತನಾಡಿದರು. ಸಂವಿಧಾನದ ಆದರ್ಶ ತಾತ್ವಿಕ ನೋಟ ಎಂಬ ವಿಷಯ ಬಗ್ಗೆ ಬಿ.ಆರ್.ವೆಂಕಟರಮಣ ಐತಾಳ ಉಪನ್ಯಾಸ ನೀಡಿದರು. ರಂಗ ಸಮಾಜ ಸದಸ್ಯ ಮಹಾಂತೇಶ ಗಜೇಂದ್ರಗಢ, ಬೈಲಡ್ಕ ಶರತ್ ಪೂಜಾರಿ, ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಉಪಸ್ಥಿತರಿದ್ದರು.

ವಸಂತ್ ನಿರೂಪಿಸಿದರು. ಯಕ್ಷ ರಂಗಾಯಣದ ರೆಪರ್ಟರಿ ಕಲಾವಿದರಿಂದ ಕುಮಾರವ್ಯಾಸ ಭಾರತದ ವಿರಾಟ ಪರ್ವದಿಂದ ಆಯ್ದ ಭಾಗ ‘ಆರೊಡನೆ ಕಾದುವೆನು’ ನಾಟಕ ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net