ಚಿಂತಾಮಣಿ: ತಾಲೂಕಿನ ಕಡದನಮರಿ ಗ್ರಾಮದ ಸುಬ್ಬರೆಡ್ಡಿ(70) ಮನೆಯ ಮುಂಭಾಗದ ತೆಂಗಿನ ಮರದ ಕೆಳಗೆ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಖಚಿತ ಮಾಹಿತಿಯ ಮೇರೆಗೆ ಬಟ್ಲಹಳ್ಳಿ ಪೊಲೀಸರು
ಸೋಮವಾರ ದಾಳಿ ಮಾಡಿದ್ದಾರೆ.
ಪೊಲೀಸರ ಆಗಮನವನ್ನು ಕಂಡ ಸುಬ್ಬರೆಡ್ಡಿ ಮತ್ತು ಮದ್ಯ ಸೇವನೆಗೆ ಬಂದಿದ್ದವರು ಪರಾರಿಯಾಗಿದ್ದು,ಪಂಚರ ಸಮಕ್ಷಮ ಪರಿಶೀಲನೆ ಮಾಡಲಾಯಿತು. ಸರಕನ್ನು ವಶಪಡಿಸಿಕೊಂಡಿದ್ದಾರೆ. ಪರಾರಿಯಾದ ಸುಬ್ಬರೆಡ್ಡಿ ವಿರುದ್ಧ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.