ಸೆಲ್ಫಿ ಪ್ರಿಯರಿಗೆ ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್! ಇಲ್ಲಿದೆ ವಿವರ

Untitled design - 2024-02-20T103414.520
Published on

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ತಮ್ಮ ದಿನನಿತ್ಯದ ಕೆಲಸ-ಕಾರ್ಯಗಳಿಗಾಗಿ ಅಧಿಕ ಸಂಖ್ಯೆಯಲ್ಲಿ ಮೆಟ್ರೋ ಸಂಚಾರ ಬಳಸುವ ಪ್ರಯಾಣಿಕರಿಗೆ ಇದೀಗ ಬಿಎಂಆರ್​​ಸಿಎಲ್​ ಹೊಸ ಸುದ್ದಿಯೊಂದನ್ನು ನೀಡಿದೆ. ಇಂದು ಮೆಟ್ರೋ ನಿಲ್ದಾಣಗಳಲ್ಲಿ ಸೆಲ್ಫಿ ತೆಗೆಯುವ ಗೀಳು ಅನೇಕರಲ್ಲಿ ಮೂಡಿದೆ. ರೈಲಿನೊಳಗೆ ಸೆಲ್ಫಿ ಕ್ಲಿಕ್ಕಿಸುವುದು, ರೈಲ್ವೇ ನಿಲ್ದಾಣದ ಪ್ಲಾಟ್​ಫಾರ್ಮ್​ಗಳ ಸ್ಥಳಗಳಲ್ಲಿ ಫೋಟೋ ತೆಗೆಯುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡ ನಮ್ಮ ಮೆಟ್ರೋ ಇದೀಗ ಸೆಲ್ಫೀ ಪಾಯಿಂಟ್​ ತೆರೆದಿದೆ.

ನಮ್ಮ ಮೆಟ್ರೋದಲ್ಲಿ ವಿನೂತನ ಸೆಲ್ಫಿ ಪಾಯಿಂಟ್ ನಿರ್ಮಾಣವಾಗಿದ್ದು, ಪ್ರಯಾಣಿಕರಿಗಾಗಿ ಈ ರೈಲು ನಿಲ್ದಾಣಗಳಲ್ಲಿ ನೂತನ ಸೆಲ್ಫಿ ಪಾಯಿಂಟ್​ ಸ್ಥಾಪಿಸಲಾಗಿದೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಸೆಲ್ಫಿ ಪಾಯಿಂಟ್​ಗಳನ್ನು ನಿರ್ಮಿಸಿದ್ದು, ಹಸಿರು ಮಾರ್ಗದ ಬನಶಂಕರಿ, ಕೋಣನಕುಂಟೆ ಸ್ಟಾಪ್​ಗಳಲ್ಲಿ ಸ್ಟಾರ್ಟ್​ ಮಾಡಲಾಗಿದೆ.

ಗೋಡೆಯ ಮೇಲೆ ಹಸಿರು ಹೊದಿಕೆಯಂತೆ ಕಾಣುವ ಬೋರ್ಡ್ ರೀತಿಯ ಪರದೆಯನ್ನು ಅಳವಡಿಸಲಾಗಿದೆ. ಸೆಲ್ಫಿ ಪಾಯಿಂಟ್ ಸುತ್ತಲೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರು ಮೊಬೈಲ್‌ನಲ್ಲೇ ಸೆಲ್ಫಿ ತೆಗೆದುಕೊಳ್ಳಬಹುದಾಗಿದೆ. ಫೋಟೋ ತೆಗೆದುಕೊಳ್ಳಲು ಇಚ್ಛಿಸುವವರಿಗೆ ಈ ಅವಕಾಶ ಕಲ್ಪಿಸಲಾಗಿದೆ.

ಸೆಲ್ಫಿ ಪಾಯಿಂಟ್​ಗಾಗಿ ಮತ್ತಷ್ಟು ಸ್ಥಳ ಮೀಸಲಿಟ್ಟಿದ್ದು, ಲೈಟಿಂಗ್​ನಿಂದ ಕಂಗೊಳಿಸುತ್ತಿರುವ ಸೆಲ್ಫಿ ಪಾಯಿಂಟ್​ ನೋಡಿ ಪ್ರಯಾಣಿಕರು ಖುಷ್ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net