

ಗುಂಡ್ಲುಪೇಟೆ: ತಾಲೂಕಿನ ಹಸಗೂಲಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಮೇಲುಗೈ ಸಾಧಿಸಿದ್ದಾರೆ.
8 ಕಾಂಗ್ರೆಸ್ ಬೆಂಬಲಿತರು ಹಾಗೂ ಬಿಜೆಪಿ ಬೆಂಬಲಿತ 3 ಜನರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಬಸವರಾಜು, ನಿಂಗಪ್ಪ, ಎಚ್.ಎಂ. ನಾಗರಾಜು, ಎಚ್.ಎಂ. ಮಹದೇವಪ್ಪ, ದ್ರಾಕ್ಷಾಯಿಣಿ, ಬಸಮ್ಮಣಿ, ಮಹದೇವಶೆಟ್ಟಿ, ಶಿವಯ್ಯ, ಬಿಜೆಪಿಯ ಉಮೇಶ್, ಅನುಮಲ್ಲೇಶ್, ಬಸವಣ್ಣ ಜಯಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಸಹಕಾರ ಇಲಾಖೆಯ ಪದ್ಮನಾಭ್ ಪ್ರಕಟಿಸಿದರು.