ಮದಲಾಪುರ ಡೇರಿಗೆ 8 ನಿರ್ದೇಶಕರ ಆಯ್ಕೆ

12ark-7
ಅರಕಲಗೂಡು ತಾಲೂಕು ಮದಲಾಪುರ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಡಳಿಯ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ವಿಜೇತರನ್ನು ಗ್ರಾಮಸ್ಥರು ಅಭಿನಂದಿಸಿದರು. ರಂಗಸ್ವಾಮಿ, ಮಂಜುನಾಥ್, ವರಲಕ್ಷ್ಮಿ ಇತರರು ಇದ್ದರು.
Published on

ಅರಕಲಗೂಡು: ತಾಲೂಕಿನ ಮದಲಾಪುರ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಂಟು ಮಂದಿ ಚುನಾಯಿತರಾದರು.

ನಿರ್ದೇಶಕರ ಸ್ಥಾನಕ್ಕೆ ಒಟ್ಟು 16 ಮಂದಿ ಸ್ಪರ್ಧಿಸಿದ್ದು, ಈ ಪೈಕಿ ಅಧಿಕ ಮತಗಳನ್ನು ಪಡೆದು ಎಂಟು ಮಂದಿ ಆಯ್ಕೆಯಾದರು. ಕಮಲಾ 54 ಮತಗಳು, ಗೌರಮ್ಮ ಕೋಂ ಪಾಪಣ್ಣ, ಜಯಮ್ಮ ತಲಾ 51 ಮತಗಳು, ಮಂಜುಳಾ ಕೋಂ ಗೋವಿಂದೇಗೌಡ 55 ಮತಗಳು, ರತ್ನ, ರತ್ನಮ್ಮ ತಲಾ 54 ಮತಗಳು, ಶೋಭಾ 56 ಮತಗಳು ಹಾಗೂ ಸುಂದರಮ್ಮ ಅವರು 50 ಮತಗಳನ್ನು ಗಳಿಸಿ ಗೆಲುವು ಸಾಧಿಸಿದರು.

ಸಹಕಾರ ಇಲಾಖೆ ಅಧಿಕಾರಿ ನವೀನ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಗ್ರಾಪಂ ಸದಸ್ಯ ಎಂ.ಆರ್. ರಂಗಸ್ವಾಮಿ ವಿಜೇತರನ್ನು ಅಭಿನಂದಿಸಿ, ಚುನಾಯಿತರಾದ ಎಲ್ಲ ನಿರ್ದೇಶಕರು ಸಂಘದ ಏಳಿಗೆಗೆ ಕೈಜೋಡಿಸುವಂತೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net