

ಪಿರಿಯಾಪಟ್ಟಣ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಆರ್.ರವಿಕುಮಾರ್, ಉಪಾಧ್ಯಕ್ಷರಾಗಿ ಬಿ.ವಿ.ಜಯಂತಿ ಮತ್ತು ಖಜಾಂಚಿಯಾಗಿ ಎಂ.ರುದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಖಜಾಂಚಿ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಇವರನ್ನು ಹೊರತುಪಡಿಸಿದರೆ ಮತ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಹಿತೇಂದ್ರ ಇವರು ಅವಿರೋಧವಾಗಿ ಆಯ್ಕೆ ಆಗಿರುವುದಾಗಿ ಘೋಷಿಸಿದರು.
ಸಂಘದ ನಿರ್ದೇಶಕರಾದ ಮಹದೇವ್, ಕಿರಣ್,ಇ.ಬಿ.ವೆಂಕಟೇಶ್, ಹರೀಶ್, ದಿವ್ಯಾ, ವೀಣಾ, ಕಿರಣ್, ಚಂದ್ರು, ರಘು, ಶಿವಕುಮಾರ್, ಪುಟ್ಟಸ್ವಾಮಿ, ಗಾಯತ್ರಿ, ಶಿಕ್ಷಕರಾದ ನಟರಾಜ್ ನಾಯಕ, ಗಣೇಶ್, ಶಿವಮೂರ್ತಿ, ಶ್ರೀಧರ್, ಯುವರಾಜ್, ಮಲ್ಲಿಕಾರ್ಜುನ, ನಾಗೇಂದ್ರ, ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.