ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆ

New Project (17)
Published on

ಬಂಟ್ವಾಳ: ಕರ್ನಾಟಕ ಒಲಿಂಪಿಕ್ ಅಸೋಸಿಯೇಶನ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನವೆಂಬರ್‌ನಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ 2025ರ 4ನೇ ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ 5 ಮಂದಿ ಟ್ವೆಕಾಂಡೋ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

35 ಕೆ.ಜಿ.ಗಿಂತ ಕೆಳಗಿನ ವಿಭಾಗದಲ್ಲಿ ಸುರತ್ಕಲ್ ಕೋಡಿಕೆರೆ ನಿವಾಸಿ ಆದರ್ಶ್, 39 ಕೆ.ಜಿ. ವಿಭಾಗದಲ್ಲಿ ಬೈಕಂಪಾಡಿ ನಿವಾಸಿ ಆಶಿಶ್ ಧಾಮಿ, 38 ಕೆ.ಜಿ. ಕೆಳಗಿನ ವಿಭಾಗದಲ್ಲಿ ವಿಟ್ಲ ನಿವಾಸಿ ರಿಫಾ ಫಾತಿಮಾ, ಕುಳಾಯಿ ನಿವಾಸಿ ಮುಹಮ್ಮದ್ ಶಿಮಾಕ್ ಅಲಿ ಹಾಗೂ 31 ಕೆ.ಜಿ. ವಿಭಾಗದಲ್ಲಿ ನಂದಾವರ ನಿವಾಸಿ ಮುಹಮ್ಮದ್ ಶಯಾನ್ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.

ದ.ಕ. ಟ್ವೇಕಾಂಡೋ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಇಸ್ಮಾಯಿಲ್ ನಂದಾವರ ಹಾಗೂ ಕೋಚ್ ಮೆಹುಲ್ ಬಂಗೇರಾ ನೇತೃತ್ವದಲ್ಲಿ ಎಕ್‌ಸ್ಟ್ರೀಂ ಫಿಟ್ ಆ್ಯಂಡ್ ಫೈಟ್ ಕ್ಲಬ್ ಸಂಸ್ಥೆಯಲ್ಲಿ ಕ್ರೀಡಾಪಟುಗಳು ತರಬೇತಿ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net