ಕುತ್ಯಾಳದಲ್ಲಿ ರಜತ ರಂಗ ಸರಣಿಗೆ ಚಾಲನೆ

New Project (5)
Published on

ಕಾಸರಗೋಡು: ಕೂಡ್ಲು ಕುತ್ಯಾಳ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಬೆಳ್ಳಿಹಬ್ಬ ‘ರಜತ ರಂಗ’ ಎಂಬ ಹೆಸರಿನಲ್ಲಿ ವರ್ಷಪೂರ್ತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಕೂಡ್ಲು ಕುತ್ಯಾಳ ಗೋಪಾಲಕೃಷ್ಣ ದೇವಾಲಯದಲ್ಲಿ ಸರಣಿಗೆ ಚಾಲನೆ ನೀಡಲಾಯಿತು.

ಕಾಸರಗೋಡು ಸರ್ಕಾರಿ ಜನರಲ್ ಆಸ್ಪತ್ರೆ ತಜ್ಞ ವೈದ್ಯ ಸಿ.ಎಚ್.ಜನಾರ್ದನ ನಾಯ್ಕ ಸಮಾರಂಭ ಉದ್ಘಾಟಿಸಿದರು. ದೇವಾಲಯದ ಆನುವಂಶಿಕ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದ್ದರು. ಕೀರ್ತಿಶೇಷ ಕೂಡ್ಲು ಸುಬ್ರಾಯ ಶ್ಯಾನುಭೋಗರ ಬಗ್ಗೆ ನಿವೃತ್ತ ಮುಖ್ಯಶಿಕ್ಷಕ ಬಜಕೂಡ್ಲು ರಾಜೇಂದ್ರ, ಕೀರ್ತಿಶೇಷ ಬಲಿಪ ನಾರಾಯಣ ಭಾಗವತರ ಬಗ್ಗೆ ವಿ.ಜಿ.ಕಾಸರಗೋಡು ಸಂಸ್ಮರಣಾ ಭಾಷಣ ಮಾಡಿದರು.

ಡಾ.ಹರಿಕಿರಣ್ ಬಂಗೇರ, ಡಾ.ಕೆ.ಕೆ.ಶ್ಯಾನುಭೋಗ್, ಬಲಿಪ ಶಿವಶಂಕರ ಭಾಗವತ, ಹರಿನಾರಾಯಣ ಮಯ್ಯ ಉಪಸ್ಥಿತರಿದ್ದರು. ಕಲಾವಿದರಿಂದ ಜ್ವಾಲಾ ಪ್ರತಾಪ ಯಕ್ಷಗಾನ ತಾಳಮದ್ದಳೆ, ಕೇಂದ್ರದ ಸದಸ್ಯರಿಂದ ನರಕಾಸುರ ಮೋಕ್ಷ ಯಕ್ಷಗಾನ ಪ್ರದರ್ಶನ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net