ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಸ್ಪರ್ಧೆಗೆ ಆಯ್ಕೆ

10
Published on

ಸುಳ್ಯ: ಬಿಹಾರದ ಪಾಟ್ನಾದಲ್ಲಿ ನಡೆಯಲಿರುವ 20ನೇ ರಾಷ್ಟ್ರೀಯ ಯುವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ 2025ರಲ್ಲಿ 100 ಮೀಟರ್ ಓಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಅರ್ಹತೆ ಪಡೆಯುವ ಮೂಲಕ ಅಜ್ಜಾವರ ಮೂಲದ ನಿಹಾಲ್ ಕಮಾಲ್ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಇವರು ಫೆಬ್ರವರಿ 28ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಯುವ ಕ್ರೀಡಾಪಟುಗಳ ಆಯ್ಕೆ ಕೂಟದಲ್ಲಿ ಮಿಂಚಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. 16 ವರ್ಷ ವಯಸ್ಸಿನ ನಿಹಾಲ್ ಕುವೈತ್‌ನ ದೆಹಲಿ ಪಬ್ಲಿಕ್ ಶಾಲೆಯಲ್ಲಿ 12ನೇ ತರಗತಿ ವಿದ್ಯಾರ್ಥಿ ಮತ್ತು ಕುವೈತ್ ಫೆಡರೇಶನ್ ನ ಹೆಮ್ಮೆಯ ಸದಸ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net