ಕ್ರೈಸ್ತ ಸಮುದಾಯದಿಂದ ಹೊರೆಕಾಣಿಕೆ ಸಮರ್ಪಣೆ

10
Published on

ಮೂಡುಬಿದಿರೆ: ಚೌಟ ಅರಸರ ಆಳ್ವಿಕೆ ಸಂದರ್ಭ ನಿರ್ಮಾಣಗೊಂಡ, 800 ವರ್ಷಗಳ ಇತಿಹಾಸವಿರುವ ಪುತ್ತಿಗೆಯ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದ್ದು, ಊರ-ಪರವೂರಿನಿಂದ ಹೊರೆಕಾಣಿಕೆ ಬರುತ್ತಿದೆ. ಮೂಡುಬಿದಿರೆ ತಾಲೂಕಿನ ವಿವಿಧ ಭಾಗಗಳ ಕ್ರೈಸ್ತ ಸಮುದಾಯದವರು ದೇವಳಕ್ಕೆ ಹೊರೆಕಾಣಿಕೆ ಸಮರ್ಪಿಸಿದ್ದಾರೆ.

ಹೊಸಬೆಟ್ಟು ಚರ್ಚ್ ವತಿಯಿಂದ ಹಸಿರು ಹೊರೆಕಾಣಿಕೆ ಪುತ್ತಿಗೆ ದೇವಳಕ್ಕೆ ಸಮರ್ಪಿಸಲಾಯಿತು. ಹೊಸಬೆಟ್ಟು ಚರ್ಚ್ ಧರ್ಮಗುರು ಗ್ರೆಗರಿ ಡಿಸೋಜ, ವಕೀಲ ಪ್ರವೀಣ್ ಲೋಬೋ, ಮನೋಹರ ಕುಟಿನ್ಹ, ವಿಲ್ಫ್ರೆಡ್ ಮೆಂಡೋನ್ಸ, ಡೇನಿಸ್ ಫರ್ನಾಂಡಿಸ್, ವಿನ್ಸೆಂಟ್ ಸಾಂತ್ಮಯೋರ್, ಎವ್ಜಿನ್ ಪಿಂಟೋ, ರೀಟಾ ಕುಟಿನ್ಹೊ, ಮೇಬಲ್ ಪಿಂಟೋ, ಲೀನಾ ಟೆಲ್ಲಿಸ್, ಮಾರ್ಕ್ ಪಿಂಟೋ ಪಾಲ್ಗೊಂಡಿದ್ದರು.

ದೇವಸ್ಥಾನಕ್ಕೆ ಭೇಟಿ ನೀಡಿದ ಚರ್ಚ್ ಧರ್ಮಗುರುಗಳನ್ನು ಸನ್ಮಾನಿಸಿದ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕುಲದೀಪ್ ಎಂ., ಜೀರ್ಣೋದ್ಧಾರ ಕೆಲಸಗಳ ಬಗ್ಗೆ ವಿವರಿಸಿ ಕೃತಜ್ಞತೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net