ಅದ್ವಿಕ ಟ್ರಯಥ್ಲಾನ್‌ನಲ್ಲಿ ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆ

Published on

ಬೆಳ್ತಂಗಡಿ: ಮೈಸೂರು ಚಾಮುಂಡಿ ವಿಹಾರ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಕಿರಿಯರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 14ರ ವಯೋಮಿತಿಯ ಬಾಲಕಿಯರಲ್ಲಿ ಸೇಂಟ್ ಆಗ್ನೆಸ್ ಶಾಲೆಯ 7ನೇ ತರಗತಿಯ ಅದ್ವಿಕ ಕೆ.ಪಿ ಟ್ರಯಥ್ಲಾನ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಜತೆಗೆ ಅತ್ಯುತ್ತಮ ಅಥ್ಲೀಟ್ ಪ್ರಶಸ್ತಿ ಪಡೆದುಕೊಂಡು ದಕ್ಷಿಣ ಭಾರತ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ದಿನೇಶ್ ಕುಂದರ್ ತರಬೇತಿ ನೀಡುತ್ತಿದ್ದಾರೆ.ಇವರು ಡಾ.ಅರುಣ್ ಕುಮಾರ್ ಮತ್ತು ಗೀತಾ ಪಾಲೇರ್ ದಂಪತಿಯ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net